ರೈಲು ದುರಂತ: ಶವಗಳನ್ನಿಟ್ಟಿದ್ದ 65 ವರ್ಷ ಹಳೆಯ ಕಟ್ಟಡ ನೆಲಸಮ..!
ಮೊನ್ನೆ ನಡೆದ ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಮೃತದೇಹಗಳನ್ನು ಇರಿಸಲು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಿದ್ದ 65 ವರ್ಷ ಹಳೆಯ ಶಾಲಾ ಕಟ್ಟಡವನ್ನು ಇಂದು ನೆಲಸಮಗೊಳಿಸಲಾಗಿದೆ.
ಸುಮಾರು 288 ಮಂದಿಯ ಸಾವಿಗೆ ಕಾರಣವಾದ ರೈಲು ಅಪಘಾತದ ನಂತರ ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ ಬಾಲಸೋರ್‌ನ ಸರ್ಕಾರಿ ಬಹನಾಗಾ ಪ್ರೌಢಶಾಲೆಯನ್ನು ಇಂದು ಕೆಡವಲಾಗಿದೆ. ಯಾಕೆಂದರೆ ದುರಂತ ಸಂಭವಿಸಿದ ನಂತರ ವಿದ್ಯಾರ್ಥಿಗಳಿಗೆ ಆ ಕಟ್ಟಡದಲ್ಲಿರುವ ತಮ್ಮ ತರಗತಿಗಳಿಗೆ ಮರಳಲು ಇಷ್ಟವಿರಲಿಲ್ಲ.
ಹಲವು ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆ ಆವರಣಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದು, ಹಳೆ ಕಟ್ಟಡವನ್ನು ಕೆಡವುವಂತೆ ಶಾಲಾ ಆಡಳಿತ ಸಮಿತಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಕಟ್ಟಡ ಸುರಕ್ಷಿತವಾಗಿಲ್ಲ. ರೈಲು ಅಪಘಾತ ಘಟನೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ಇಲ್ಲಿನ ಕಿರಿಯ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಎಂದು ಬಹನಾಗಾ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಸ್ವೈನ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಶಾಲೆಗೆ ಭೇಟಿ ನೀಡಿದ್ದ ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರಯ ಭೌಸಾಹೇಬ್ ಶಿಂಧೆ, ‘ಶಾಲಾ ಆಡಳಿತ ಸಮಿತಿ ಸದಸ್ಯರು, ಮುಖ್ಯೋಪಾಧ್ಯಾಯಿನಿ, ಇತರೆ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಭೇಟಿ ಮಾಡಿ, ಹಳೆ ಕಟ್ಟಡವನ್ನು ಕೆಡವಿ ಮಕ್ಕಳಿಗೆ ನವೀಕರಿಸಲು ಮುಂದಾಗಿದ್ದಾರೆ. ಮಕ್ಕಳು ತರಗತಿಗೆ ಬರಲು ಭಯ ವ್ಯಕ್ತಪಡಿಸಿದ ನಂತರ ಇದನ್ನು ಕೆಡವಲು ನಿರ್ಧರಿಸಲಾಯಿತು ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw