ಈಗ ಮನಮೋಹನ್ ಸಿಂಗ್ ಪ್ರಧಾನಿಯಾಗಿರುತ್ತಿದ್ದರೆ, ಭಾರತೀಯರು ರಕ್ಷಣೆಗಾಗಿ ಪರದಾಡಬೇಕಿತ್ತು | ನಳಿನ್ ಕುಮಾರ್ ಕಟೀಲ್ - Mahanayaka

ಈಗ ಮನಮೋಹನ್ ಸಿಂಗ್ ಪ್ರಧಾನಿಯಾಗಿರುತ್ತಿದ್ದರೆ, ಭಾರತೀಯರು ರಕ್ಷಣೆಗಾಗಿ ಪರದಾಡಬೇಕಿತ್ತು | ನಳಿನ್ ಕುಮಾರ್ ಕಟೀಲ್

nalin kumar kateel
25/08/2021

ಮಂಡ್ಯ: ಅಫ್ಘಾನಿಸ್ತಾನದ ಪ್ರಕ್ಷುಬ್ಧ ಪರಿಸ್ಥಿತಿಯ ಸಂದರ್ಭದಲ್ಲಿ  ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನದಲ್ಲಿರುವ ಪ್ರತಿಯೊಬ್ಬ ಭಾರತೀಯರನ್ನೂ ರಕ್ಷಿಸಿದ್ದಾರೆ. ಈ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ, ಭಾರತೀಯರು ರಕ್ಷಣೆಗಾಗಿ ಪರದಾಡುವ ಸ್ಥಿತಿಯಲ್ಲಿರುತ್ತಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

ನಗರದ ಸುಮಾರವಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಬಿಜೆಪಿ ರಾಜ್ಯಾ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,  ಅಫ್ಘಾನಿಸ್ತಾನದ ಇಂತಹ ಸ್ಥಿತಿಯಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿರುತ್ತಿದ್ದರೆ,  ಕಾಂಗ್ರೆಸ್ ಮುಖಂಡರು ಭಾರತೀಯರನ್ನು ಕರೆತರುವ ಬದಲು ತಾಲಿಬಾನಿಗಳನ್ನೇ ಕರೆತರುತ್ತಿದ್ದರು ಎಂದು ಅವರು ವ್ಯಂಗ್ಯವಾಡಿದರು.

ಇನ್ನೂ ರಾಜ್ಯ ಕಾಂಗ್ರೆಸ್‌ ಮುಖಂಡರು ಒಳಜಗಳದಲ್ಲಿ ಮುಳುಗಿದ್ದಾರೆ. ಕಾಂಗ್ರೆಸ್‌ನಲ್ಲಿ ಪದಾಧಿಕಾರಿಗಳ ಆಯ್ಕೆಯೇ ನಡೆದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಪ್ರತ್ಯೇಕ ಪಟ್ಟಿ ಸಿದ್ಧಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹುದ್ದೆಯ ಜಗಳ ಒಂದೆಡೆಯಾದರೆ ಪದಾಧಿಕಾರಿಗಳ ಆಯ್ಕೆ ಜಗಳವೂ ಇನ್ನೊಂದೆಡೆ ನಡೆಯುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.

 ಇನ್ನಷ್ಟು ಸುದ್ದಿಗಳು…

 

ಅಫ್ಘಾನಿಸ್ತಾನದ ಸಚಿವ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್!

ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ!

ಅಂಬೇಡ್ಕರ್ ಸಂಶೋಧಕಿ, ದಲಿತ ಚಳುವಳಿಗಾರ್ತಿ ಡಾ.ಗೇಲ್ ಓಮ್ವೇಡ್ ನಿಧನ

ಭಾರತವು ಕಂಪೆನಿಗಳ ಗುಲಾಮಗಿರಿಯತ್ತ ಸಾಗುತ್ತಿದೆ | ಈಸ್ಟ್ ಇಂಡಿಯಾ ಕಂಪೆನಿಯನ್ನು ನೆನಪಿಸಿದ ರಾಹುಲ್ ಗಾಂಧಿ

ಪೊಲೀಸರನ್ನು ಕ್ಯಾರೇ ಮಾಡದೇ ಬಿಜೆಪಿಯಿಂದ ಮಂಡ್ಯದಲ್ಲಿ ಬೃಹತ್ ರಾಜಕೀಯ ಜಾತ್ರೆ!

ದೇವರಿಗೆ ಹರಕೆ ತೀರಿಸಿ, ಕಾಲುವೆಗೆ ಇಳಿದ 8 ಮಂದಿಯ ಪೈಕಿ ಮೂವರ ದಾರುಣ ಸಾವು | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?

ದೇವರಿಗೆ ಹರಕೆ ತೀರಿಸಿ, ಕಾಲುವೆಗೆ ಇಳಿದ 8 ಮಂದಿಯ ಪೈಕಿ ಮೂವರ ದಾರುಣ ಸಾವು | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?

ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ

ಇತ್ತೀಚಿನ ಸುದ್ದಿ