ಮಾನವಹಕ್ಕುಗಳ ಉಲ್ಲಂಘನೆ: 12 ಸಾವಿರಕ್ಕೂ ಹೆಚ್ಚು ಮಂದಿಯ ಅಕ್ರಮ ಬಂಧನ; ವಿಶ್ವಸಂಸ್ಥೆ ಕಳವಳ - Mahanayaka
5:28 AM Wednesday 11 - December 2024

ಮಾನವಹಕ್ಕುಗಳ ಉಲ್ಲಂಘನೆ: 12 ಸಾವಿರಕ್ಕೂ ಹೆಚ್ಚು ಮಂದಿಯ ಅಕ್ರಮ ಬಂಧನ; ವಿಶ್ವಸಂಸ್ಥೆ ಕಳವಳ

guteras
18/01/2022

ವಿಶ್ವಸಂಸ್ಥೆ: ಲಿಬಿಯಾದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಅಲ್ಲಿನ 27 ಜೈಲುಗಳಲ್ಲಿ 12 ಸಾವಿರಕ್ಕೂ ಹೆಚ್ಚು ಬಂಧಿತರನ್ನು ಇರಿಸಲಾಗಿದೆ. ಸಾವಿರಾರು ಮಂದಿಗೆ ಚಿತ್ರಹಿಂಸೆ ನೀಡಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮಾಹಿತಿ ನೀಡಿದ್ದಾರೆ ಎಂದು ಸೋಮವಾರ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಲಿಬಿಯಾದ ಸಶಸ್ತ್ರ ಪಡೆಗಳು ನಿರಾಶ್ರಿತರು, ವಲಸಿಗರ ಮೇಲೆ ಸಾಕಷ್ಟು ನಿರ್ಬಂಧ ವಿಧಿಸಿವೆ. ದೌರ್ಜನ್ಯ, ಚಿತ್ರಹಿಂಸೆ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಾಗುತ್ತಿದ್ದು, ಈ ಕುರಿತಂತೆ ಯುಎನ್‌ಎಸ್‌ಎಂಐಎಲ್ ಎಂದು ಕರೆಯಲ್ಪಡುವ ಯುಎನ್ ಮಿಷನ್ ಅನೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳುವುದನ್ನು ಮುಂದುವರಿಸಿದೆ ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ.

ಬಂಧಿತರು 12 ಸಾವಿರ ಮಂದಿ ಎಂಬುದು ಲಿಬಿಯಾದ ಅಧಿಕಾರಿಗಳು ನೀಡಿದ ಮಾಹಿತಿಯಾಗಿದೆ. ಅದಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಅಲ್ಲಿನ ವಲಸಿಗರು, ನಿರಾಶ್ರಿತರ ಮಾನವ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ವಿಚಾರದಲ್ಲಿ ನಾನು ಕಳವಳಕ್ಕೆ ಒಳಗಾಗಿದ್ದೇನೆ ಎಂದು ಆಂಟೋನಿಯೋ ಗುಟೆರಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ಲಿಬಿಯಾದ ನಿರಾಶ್ರಿತ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ಲೈಂಗಿಕ ಕಿರುಕುಳ ನಡೆಯುತ್ತಿದೆ. ಲಿಬಿಯಾ ಗೃಹ ಸಚಿವಾಲಯದ ಅಡಿ ಬರುವ ಅಕ್ರಮ ವಲಸೆ ನಿಯಂತ್ರಣ ನಿರ್ದೇಶಾನಾಲಯದ ಅಧಿಕಾರಿಗಳೂ ಮಾನವ ಕಳ್ಳಸಾಗಣೆ, ಅತ್ಯಾಚಾರದಂತ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಗುಟೆರಸ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಲಿಬಿಯಾ ಮಿಷನ್ ಈ ಕುರಿತು ಅನೇಕ ಪ್ರಕರಣಗಳನ್ನು ದಾಖಲಿಸಿದೆ. ಮಿಟಿಗಾ ಜೈಲು ಮತ್ತು ಇತರ ಬಂಧನ ಕೇಂದ್ರಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ.ಬಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಮತ್ತು ಅಲ್​ ಝವಿಯಾಹ್ ನಗರದಲ್ಲಿರುವ ಹಲವಾರು ಬಂಧನ ಕೇಂದ್ರಗಳಲ್ಲಿ ಸುಮಾರು 30 ನೈಜಿರಿಯಾದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಮತ್ತು ಕಳ್ಳಸಾಗಣೆ ಮಾಡಲಾಗಿದೆ ಎಂಬ ವಿಶ್ವಾಸಾರ್ಹ ಮಾಹಿತಿಯನ್ನು ವಿಶ್ವಸಂಸ್ಥೆಯ ಮಿಷನ್ ಪಡೆದುಕೊಂಡಿದೆ ಎಂದು ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವರದಕ್ಷಿಣೆ ಕೊಡದಿದ್ದರೆ ಬೆತ್ತಲೆ ಚಿತ್ರ ವೈರಲ್ ಮಾಡುತ್ತೇನೆಂದ ಪತಿ: ಪತ್ನಿಯಿಂದ ದೂರು

ವೀಕೆಂಡ್‌ ಕರ್ಫ್ಯೂ, ಲಾಕ್‌ ಡೌನ್‌ ಗೆ ನನ್ನ ವಿರೋಧ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಮೋದಿ ಹೇಳಿದ್ದಕ್ಕೆ ನಾನು ಮಾಸ್ಕ್ ಧರಿಸಿಲ್ಲ: ಉಮೇಶ್ ಕತ್ತಿ

ಶಿಕ್ಷಕಿಗೆ ಅವಹೇಳನಾಕಾರಿ ಗಿಫ್ಟ್ ನೀಡಿದ ಮನೆ ಮಾಲಿಕ: ಆರೋಪಿ ವಿರುದ್ಧ ಎಫ್ ಐಆರ್

ಅಕಾಲಿಕ ಮುಪ್ಪು ರೋಗಕ್ಕೆ ಖ್ಯಾತ ಯೂಟ್ಯೂಬರ್ ಬಲಿ

 

ಇತ್ತೀಚಿನ ಸುದ್ದಿ