ಮಾನವ ಕಳ್ಳಸಾಗಣೆ: 41 ಆರೋಪಿಗಳಿಗೆ ಕಠಿಣ ಶಿಕ್ಷೆ
ಲಕ್ನೋ: ಮೇ 1, 2016 ರಂದು ನಡೆಸಿದ ಪ್ರಮುಖ ಪೊಲೀಸ್ ಕಾರ್ಯಾಚರಣೆಯಲ್ಲಿ ಪ್ರಯಾಗರಾಜ್ ನ ಮೀರಗಂಜ್ ನಲ್ಲಿ ಮಾನವ ಕಳ್ಳಸಾಗಣೆ ಮತ್ತು ಮಾಂಸದ ವ್ಯಾಪಾರದ ದಂಧೆಯಲ್ಲಿ ಭಾಗಿಯಾಗಿದ್ದ 41 ಅಪರಾಧಿಗಳಿಗೆ ಪ್ರಯಾಗ್‌ರಾಜ್ ನ ಸೆಷನ್ಸ್ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ರಚನಾ ಸಿಂಗ್ ಅವರು ಮಾನವ ಕಳ್ಳಸಾಗಣೆಯ ಎಲ್ಲ 15ಅಪರಾಧಿಗಳಿಗೆ 14 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ಮಾಂಸ ಕಳ್ಳಸಾಗಣೆ ಆರೋಪದ 26 ಅಪರಾಧಿಗಳಿಗೆ 10 ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಜನವರಿ 18, 2022 ರಂದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು 41 ಮಂದಿಯನ್ನು ದೋಷಿ ಎಂದು ಘೋಷಿಸಿದ್ದರು. ಎ ಎಸ್ ಜೆ ಆರೋಪಿಗಳ ವಿರುದ್ಧ ಲಭ್ಯವಿರುವ ಸತ್ಯ ಮತ್ತು ಸಾಕ್ಷ್ಯ ಗಳ ಆಧಾರದ ಮೇಲೆ ಅವರಿಗೆ ಶಿಕ್ಷೆ ವಿಧಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಹಾಜರಾದ ಪ್ರತಿವಾದಿ ವಕೀಲರು ಮತ್ತು ಜಿಲ್ಲಾ ಸರ್ಕಾರಿ ವಕೀಲ (ಕ್ರಿಮಿನಲ್) ಗುಲಾಬ್ ಚಂದ್ರ ಅಗ್ರಹರಿ ಅವರ ವಾದ ಆಲಿಸಿದ ನಂತರ ಶಿಕ್ಷೆ ಪ್ರಕಟಿಸಲಾಯಿತು.
ಪ್ರಕರಣದ ವಿವರ: ಈ ಆರೋಪಿಗಳು ಹೆಣ್ಣು ಮಕ್ಕಳ ಬಡತನದ ಲಾಭ ಪಡೆದುಕೊಂಡು ಆಮಿಷ ಒಡ್ಡುತ್ತಿದ್ದರು. ಬಳಿಕ ಅವರನ್ನು ಮೀರ್ ಗಂಜ್ ನ ರೆಡ್ – ಲೈಟ್ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಕೆಲವು ಸಾಮಾಜಿಕ ಸಂಘಟನೆಗಳು ಮತ್ತು ಕಾರ್ಯಕರ್ತರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದು, ನಗರದ ಹೃದಯಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮಾಂಸದ ವ್ಯಾಪಾರ ಮತ್ತು ಮಾನವ ಕಳ್ಳಸಾಗಣೆ ತೆಗೆದುಹಾಕಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.
ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ 2016ರ ಮೇ 1ರಂದು ಕಾರ್ಮಿಕರ ದಿನಾಚರಣೆಯಂದು ಬೃಹತ್ ಕಾರ್ಯಾಚರಣೆ ನಡೆಸಿ ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟ ಹಲವು ಅಪ್ರಾಪ್ತ ಬಾಲಕಿಯರನ್ನು ರಕ್ಷಿಸಿದ್ದರು. ಅಲ್ಲದೇ ಪ್ರಕರಣ ಸಂಬಂಧ 48 ಮಂದಿಯನ್ನು ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹುಚ್ಚು ಹಿಡಿದವರು ಮಾತ್ರ ಕಾಂಗ್ರೆಸ್ ಗೆ ಹೋಗುತ್ತಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಅಪಘಾತದಲ್ಲಿ ಮರ್ಮಾಂಗ ಕಳೆದುಕೊಂಡ ಯುವಕನಿಗೆ 17.66 ಲಕ್ಷ ರೂ. ಪರಿಹಾರ
ಬೆತ್ತಲೆ ಗ್ಯಾಂಗ್ ಬ್ಲಾಕ್ ಮೇಲ್: ರೈಲಿಗೆ ತಲೆ ಕೊಟ್ಟು ಇಂಜಿನಿಯರ್ ಆತ್ಮಹತ್ಯೆಗೆ ಶರಣು
ಅರಣ್ಯ ಪ್ರದೇಶಕ್ಕೆ ಬೆಂಕಿ | ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ
ವಿಮಾನ ನಿಲ್ದಾಣದಲ್ಲಿ 29 ಲಕ್ಷ ರೂ. ಮೌಲ್ಯದ ಚಿನ್ನ ವಶ