ಬಿಜೆಪಿಯವ್ರು ಮಂಚ ಮುರಿಯೋದು, ತೋರಿಸ್ ಬ್ಯಾಡ್ರೀ ಅಂತ ಸ್ಟೇ ತರೋದು | ಸಿಎಂ ಇಬ್ರಾಹಿಂ ವ್ಯಂಗ್ಯ
ಬೆಂಗಳೂರು: ಬಿಜೆಪಿಯವರು ಮಂಚ ಮುರಿಯೋದು ಬಳಿಕ, ವಿಡಿಯೋ ತೋರಿಸ ಬ್ಯಾಡ್ರೀ ಅಂತ ಕೋರ್ಟ್ ಗೆ ಹೋಗಿ ಸ್ಟೇ ತೆಗೆದುಕೊಳ್ಳೋದು ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಡಿಯೂರಪ್ಪನವರು, 12 ಜನ ಎಂಎಲ್ ಎಗಳು ವಿಡಿಯೋ ರಿಲೀಸ್ ಭೀತಿಯಿಂದ ಸ್ಟೇ ತೆಗೆದುಕೊಂಡಿದ್ದಾರೆ. ಯಾಕೆ ಸ್ಟೇ ತೆಗೆದುಕೊಂಡ್ರಿ? ಆ ವಿಡಿಯೋದಲ್ಲಿ ಏನಿತ್ತು ಹಾವ, ಭಾವ? ಕಾಣುತ್ತೆ ಅಂತನಾ? ಎಂದು ಪ್ರಶ್ನಿಸಿದರು.
ನಿಮಗೆ ಧಮ್ ಇದ್ರೆ, ವಿಡಿಯೋ ತೋರಿಸಿ, ಸರ್ಕಾರ ನಿಮ್ಮ ಕೈಯಲ್ಲಿದೆ, ಪೊಲೀಸ್ ನಿಮ್ಮ ಕೈಯಲ್ಲಿದೆ. ಇವತ್ತು ಯಾರು ಭ್ರಷ್ಟಾಚಾರ ಮಾಡಿದ್ದಾರೆ ಅಂತ ಕ್ರಮಕೈಗೊಳ್ಳಿ… ನಾವು ಅದಕ್ಕೆ ಸಿದ್ಧರಿದ್ದೇವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಡೋದು ಮಾಡಿ ಬಿಟ್ಟು, ಮಂಚ ಮುರಿದು ಕೋರ್ಟ್ ಗೆ ಹೋಗಿ ಸ್ಟೇ ತೆಗೆದುಕೊಳ್ಳೋದು. ತೋರಿಸ್ ಬ್ಯಾಡ್ರಿ ಅಂತ ಕೋರ್ಟ್ ಗೆ ಹೋಗಿ ಸ್ಟೇ ತೆಗೆದುಕೊಳ್ಳೋದು ಎಂದು ಸಿಎಂ ಇಬ್ರಾಹಿಂ ಬಿಜೆಪಿ ನಾಯಕರ ಕಾಲೆಳೆದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮತಾಂತರ ನಿಷೇಧ ಕಾಯ್ದೆಗೆ ಜೆಡಿಎಸ್ ಬೆಂಬಲಿಸುವುದಿಲ್ಲ | ಹೆಚ್.ಡಿ.ಕುಮಾರಸ್ವಾಮಿ
ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಕೇಂದ್ರ ಸಂಪುಟ ಅನುಮೋದನೆ
ಡಾನ್ಸ್ ಮಾಡುತ್ತಿದ್ದ ಮಹಿಳಾ ಕಾರ್ಯಕರ್ತೆಯರ ಮೇಲೆ ನೋಟು ಎಸೆದ ಕಾಂಗ್ರೆಸ್ ಕಾರ್ಯಕರ್ತರು | ವಿಡಿಯೋ ವೈರಲ್
ಯುವ ಸಾಮಾಜಿಕ ಹೋರಾಟಗಾರ್ತಿ ನೇಮಿಚಂದ್ರ ನಿಧನ
ಮತಾಂತರ ನಿಷೇಧ ಮಸೂದೆ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಡೆದ ಚರ್ಚೆಗಳೇನು?
ಕುಡಿತದ ಮತ್ತಿನಲ್ಲಿ ಅಪ್ರಾಪ್ತ ವಯಸ್ಸಿನ ತನ್ನ ಮಗಳನ್ನೇ ಅತ್ಯಾಚಾರ ನಡೆಸಿದ ತಂದೆ!