ಮನೆಗೋಡೆ ಕುಸಿದು ಕಾರ್ಮಿಕ ಸ್ಥಳದಲ್ಲೇ ಸಾವು - Mahanayaka
3:23 AM Wednesday 11 - December 2024

ಮನೆಗೋಡೆ ಕುಸಿದು ಕಾರ್ಮಿಕ ಸ್ಥಳದಲ್ಲೇ ಸಾವು

davanagere
09/02/2022

ಹುಬ್ಬಳ್ಳಿ: ಹಳೆ ಮನೆಯ ಗೋಡೆ ತೆರವುಗೊಳಿಸುತ್ತಿರುವ ವೇಳೆ ಗೋಡೆ ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಘಂಟಿಕೇರಿಯ ಪಗಡಿ ಗಲ್ಲಿಯಲ್ಲಿ ನಡೆದಿದೆ.

ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ನಿವಾಸಿ ಶಿವಪ್ಪ ಮುಂದಿನಮನಿ (60) ಮೃತ ವ್ಯಕ್ತಿ. ಇವರು ಮುಂದಿನಮನಿ ಗುತ್ತಿಗೆದಾರ ಗಣೇಶರಾವ್ ಶಿಂಧೆ ಎಂಬವರ ಬಳಿ ಕೆಲಸಕ್ಕೆ ಬಂದಿದ್ದರು. ರಾಜು ಹುನಗುಂದ ಎಂಬವರ ಹಳೆ ಮನೆ ಗೋಡೆ ತೆರವು ಮಾಡುತ್ತಿದ್ದ ವೇಳೆ ಗೋಡೆ ಶಿವಪ್ಪ ಮೈಮೇಲೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಘಟನೆ ಸಂಬಂಧ ಹುಬ್ಬಳ್ಳಿಯ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಪರಾರಿಯಾದ ಬೈಕ್: ಮಹಿಳೆ ಸಾವು

ಉದ್ಯೋಗದ ಆಮಿಷ: ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಮೂವರ ಬಂಧನ

ಒಂದೇ ಕುಟುಂಬದ ಐವರ ಹತ್ಯೆ ಪ್ರಕರಣ: ಹಂತಕಿಯ ಬಂಧನ

ಜೈ ಶ್ರೀರಾಮ್ ಘೋಷಣೆಗೆ, ಅಲ್ಲಾಹು ಅಕ್ಬರ್ ಎಂದು ಪ್ರತಿರೋಧ ಒಡ್ಡಿದ ವಿದ್ಯಾರ್ಥಿನಿ: ವಿಡಿಯೋ ವೈರಲ್

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ: ಮದ್ರಸ ಅಧ್ಯಾಪಕ ಅರೆಸ್ಟ್

 

ಇತ್ತೀಚಿನ ಸುದ್ದಿ