ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ | ಘಟನೆಯ ಬಳಿಕ ಮನೆಯೊಡತಿ, ಆಕೆಯ ಪುತ್ರ ಮಾಡಿದ್ದೇನು ಗೊತ್ತಾ?

11/02/2021

ಲಕ್ನೋ: ಮನೆ ಕೆಲಸ ಮಾಡುತ್ತಿದ್ದ ಯುವತಿಗೆ ವ್ಯಕ್ತಿಯೋರ್ವ ಹಲ್ಲೆ ನಡೆಸಿ ಅತ್ಯಾಚಾರ ನಡೆಸಿರುವ  ಘಟನೆ ಮೀರತ್ ಬಳಿಯ ಸರ್ಧಾನಾ ತಹಸಿಲ್ ಮೊಹಲ್ಲಾ ಘಾನ್ಶ್ಯಾಮ್ ನಲ್ಲಿ ನಡೆದಿದ್ದು, ಮನೆಯಲ್ಲಿ ಯುವತಿ ಒಂಟಿಯಾಗಿದ್ದ ಸಂದರ್ಭದಲ್ಲಿ ಆರೋಪಿ ಈ ಕೃತ್ಯ ಎಸಗಿದ್ದಾನೆ.

ಇಲ್ಲಿನ ಪನ್ವಾರಿಯಲ್ಲಿರುವ ತನ್ನ ಸೋದರ ಮಾವನ ಮನೆಯಲ್ಲಿ ವಾಸಿಸುತ್ತಿದ್ದ ಯುವತಿ ಉದ್ಯೋಗ ಹುಡುಕುತ್ತಿದ್ದರು. ಈ ವೇಳೆ ಪ್ರತಿ ದಿನ ತನ್ನ ಸಹೋದರ ಮಾವನ ಮನೆಗೆ ಬರುತ್ತಿದ್ದ ಯುವಕ ತಮ್ಮ ಮನೆಯಲ್ಲಿ ಕೆಲಸ ಖಾಲಿ ಇದೆ ಎಂದು ಹೇಳಿದ್ದು, ಈ ಹಿನ್ನೆಲೆಯಲ್ಲಿ  ಕೆಲಸಕ್ಕೆ ತೆರಳಿದ್ದಳು.

ಫೆ.4ರಂದು ಯುವಕ ಮತ್ತು ಆತನ ತಾಯಿ ಕೆಲಸದ ಮೇಲೆ ಹೊರಗಡೆ ಹೋಗಿದ್ದು, ಈ ವೇಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಯುವತಿಯನ್ನು ಯುವಕನ ತಂದೆ ತನ್ನ ಕೋಣೆಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದು, ಅತ್ಯಾಚಾರವನ್ನು ವಿರೋಧಿಸಿದಾಗ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ಇನ್ನೂ ಈ ವಿಚಾರವನ್ನು ಯುವಕನ ತಾಯಿಯ ಬಳಿ ಹೇಳಿದಾಗ ಆಕೆ ತನ್ನ ಗಂಡನನ್ನು ರಕ್ಷಿಸಲು ನೋಡಿದ್ದು, ಯುವಕ ಕೂಡ ತನ್ನ ತಂದೆಯ ಕೃತ್ಯವನ್ನು ಮುಚ್ಚಿಡಲು ಯತ್ನಿಸಿದ್ದಾನೆ. ಈ ವಿಚಾರವನ್ನು ಹೊರಗಡೆ ಯಾರಿಗೂ ಹೇಳದಂತೆ  ಅವರು ಯುವತಿಗೆ ಹೇಳಿದ್ದು, ಆಕೆಯ ಮೊಬೈಲ್ ನ್ನು ಕಸಿದುಕೊಂಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದು, ಇವರ ಕಣ್ಣು ತಪ್ಪಿಸಿ ತಾನು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದೇನೆ ಎಂದು ಆಕೆ ಪೊಲೀಸರಿಗೆ ತಿಳಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿದ್ದು,  ಆರೋಪಿ ಹಾಗೂ ಆತನ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version