ಮನೆ ಕೆಲಸದವರನ್ನು ಕೊಂದು 95 ಲಕ್ಷ ರೂ. ದೋಚಿದ ಐವರು ದರೋಡೆಕೋರರು ಅರೆಸ್ಟ್ - Mahanayaka
10:15 PM Tuesday 4 - February 2025

ಮನೆ ಕೆಲಸದವರನ್ನು ಕೊಂದು 95 ಲಕ್ಷ ರೂ. ದೋಚಿದ ಐವರು ದರೋಡೆಕೋರರು ಅರೆಸ್ಟ್

arrest
18/11/2021

ನವದೆಹಲಿ: ಮನೆ ಕೆಲಸದ ಮಹಿಳೆಯರನ್ನು ಕೊಂದು 95 ಲಕ್ಷ ರೂಪಾಯಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಈಶಾನ್ಯ ದೆಹಲಿಯ ಜಗ್ಪುರ ಬಡಾವಣೆಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ 35 ವರ್ಷ ವಯಸ್ಸಿನ ಮೀನಾ ರಾಯ್ ಹಾಗೂ 40 ವರ್ಷ ವಯಸ್ಸಿನ ಸುಜೈಲಾ ಹತ್ಯೆಗೀಡಾದ ಮನೆಗೆಲಸದ ಮಹಿಳೆಯರಾಗಿದ್ದಾರೆ.  ಈ ಪ್ರಕರಣದ ಪ್ರಮುಖ ಆರೋಪಿ ಉತ್ತರ ಪ್ರದೇಶ ಮೂಲದ ಸಚಿತ್ ಸಕ್ಸೇನಾ ಎಂಬಾತ ಆಗಿದ್ದಾನೆ.

ಸಚಿತ್ ಸಕ್ಸೇನಾ ತನ್ನ ಸಹಚರರಾದ ಪ್ರಶಾಂತ್ ಬಸಿಸ್ತಾ, ಅನಿಕೇತ್ ಝಾ, ರಮೇಶ್ ಮತ್ತು ಧನಂಜಯ ಗುಲಿಯಾ ಎಂಬವರೊಂದಿಗೆ ಸೇರಿ ದೊಡ್ಡ ಮೊತ್ತದ ಹಣವನ್ನು ದರೋಡೆ ಮಾಡಲು ಸಂಚು ಹೂಡಿದ್ದ. ಸಚಿತ್ ನ ಅತ್ತೆ ದರೋಡೆಯಾಗಿದ್ದ ಮನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಈ ಮನೆಯ ವಿವರಗಳು ಸಕ್ಸೇನಾ ಪಡೆದುಕೊಂಡಿದ್ದ ಎನ್ನಲಾಗಿದೆ.

ಕಳೆದ ಒಂದು ತಿಂಗಳಿನಿಂದ ಆರೋಪಿಗಳು ದರೋಡೆಗೆ ಸ್ಕೆಚ್ ಹಾಕಿದ್ದರು. ಕ್ಲೋರೋಫಾರ್ಮ್ಸ್, ಟೇಪ್, ಕಟ್ಟರ್, ಪಂಚ್, ಹಗ್ಗ, ಮಾಸ್ಕ್ ಗಳು ಇನ್ನಿತರ ವಸ್ತುಗಳನ್ನು ದರೋಡೆಗಾಗಿ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಜೊತೆಗೆ ಫೋನ್ ಕರೆಯ ಬದಲು ಇಂಟರ್ ನೆಟ್ ಕರೆಗಳನನ್ನು ಬಳಸಿದ್ದರು ಎನ್ನಲಾಗಿದೆ.

ರಾತ್ರಿ 1:30ರ ವೇಳೆಗೆ ಮನೆಯ ಮುಖ್ಯ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಿ ದರೋಡೆಗೆ ಮುಂದಾಗಿದ್ದಾರೆ. ಈ ವೇಳೆ ಮನೆ ಕೆಲಸದ ಮೀನಾ ರಾಯ್ ಎಚ್ಚರಗೊಂಡಿದ್ದು, ಅವರಿಗೆ ಕ್ಲೋರೋಫಾರ್ಮ್ ಹಾಕಿ ಹಗ್ಗದಿಂದ ಕೈಕಾಲು ಕಟ್ಟಿ ಹಾಕಿ ಮತ್ತೊಬ್ಬರು ಮನೆಕೆಲಸದವರನ್ನು ತಲೆ ದಿಂಬುಗಳಿಂದ ಕೊಂದು ಹಾಕಿದ್ದರು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಗೆ ಕೋಲಾರ ಪ್ರವೇಶಕ್ಕೆ ನಿರ್ಬಂಧ!

ಕಾಲುಂಗುರ, ಕಾಲ್ಗೆಜ್ಜೆ ಕಳವು ಮಾಡಲು ಮಹಿಳೆಯ ಪಾದವನ್ನೇ ಕತ್ತರಿಸಿದ ದರೋಡೆಕೋರರು!

ಮಾರಮ್ಮ, ಮಹಾಕಾಳಿಯೂ ಮಾಂಸಾಹಾರಿಗಳಲ್ಲವೇ? | ಹಂಸಲೇಖರನ್ನು ವಿಲನ್ ಮಾಡಿದ ಮಾಧ್ಯಮಗಳು

ಶಾಕಿಂಗ್ ನ್ಯೂಸ್: 2 ಡೋಸ್ ಕೊವಿಡ್ ಲಸಿಕೆ ಪಡೆದಿದ್ದರೂ ವ್ಯಕ್ತಿ ಕೊರೊನಾಕ್ಕೆ  ಬಲಿ

ವಿಶಾಲ್ ರನ್ನು ನೋಡಿದಾಗ ನನ್ನ ತಮ್ಮನನ್ನು ನೋಡಿದ ಹಾಗೆಯೇ ಆಗುತ್ತದೆ, ಅಪ್ಪು ಬಳಿಯೂ ಇದನ್ನು ಹೇಳಿದ್ದೆ | ಶಿವರಾಜ್ ಕುಮಾರ್

ಇತ್ತೀಚಿನ ಸುದ್ದಿ