ಕಟ್ಟಡ ನಿರ್ಮಾಣಕ್ಕೆ ತಂದಿದ್ದ ಸೆಂಟ್ರಿಂಗ್ ಶೀಟು, ಕಬ್ಬಿಣದ ರಾಡ್ ಕಳವು
ಕುಂದಾಪುರ: ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ಜಾಗದಲ್ಲಿ ಹಾಕಿದ್ದ 125 ಕಬ್ಬಿಣದ ಸೆಂಟ್ರಿಂಗ್ ಶೀಟು ಮತ್ತು 500 ಕೆ.ಜಿ. ಕಬ್ಬಿಣದ ರಾಡ್ ಅನ್ನು ಕಳ್ಳರು ಕದ್ದುಕೊಂಡು ಹೋಗಿರುವ ಘಟನೆ ಕುಂದಾಪುರ ತಾಲೂಕಿನ ಮೂಡುಗೋಪಾಡಿಯ ಅಶೋಕನಗರ ಎಂಬಲ್ಲಿ ಆ.31ರಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಕೋಣಿ ಗ್ರಾಮದ ಗಣಪತಿ ಎಂಬವರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರು ಸೆಂಟ್ರಿಂಗ್ ಗುತ್ತಿಗೆದಾರ ಕೆಲಸ ಮಾಡಿಕೊಂಡಿದ್ದು, ಆ.30ರಂದು ಮೂಡುಗೋಪಾಡಿಯ ಅಶೋಕನಗರ ಎಂಬಲ್ಲಿ ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ 125 ಸೀಟು ಮತ್ತು 500 ಕೆ.ಜಿ ಕಬ್ಬಿಣದ ರಾಡು ಅನ್ನು ಜಾಗದಲ್ಲಿ ಇಟ್ಟುಹೋಗಿದ್ದರು.
ಮರುದಿನ ಆ.31ರಂದು ಬೆಳಿಗ್ಗೆ ಬಂದು ನೋಡುವಾಗ ಕಬ್ಬಿಣದ ಸೀಟು ಹಾಗೂ ರಾಡ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ.
ಕಳವಾದ ಕಬ್ಬಿಣದ ಸೀಟುಗಳ ಮೌಲ್ಯ 1,25 ಲಕ್ಷ ರೂಪಾಯಿ ಮತ್ತು ಕಬ್ಬಿಣದ ರಾಡುಗಳ ಮೌಲ್ಯ 40 ಸಾವಿರ ರೂಪಾಯಿ ಸಹಿತ ಒಟ್ಟು ಮೌಲ್ಯ 1,65 ಲಕ್ಷ ರೂಪಾಯಿ ಮಾಲ್ಯದ ಸ್ವತ್ತುಗಳು ಕಳವು ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka