ಮನೆಗೆ ನುಗ್ಗಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ | ಪತ್ನಿಯ ಸ್ಥಿತಿ ಗಂಭೀರ - Mahanayaka
5:57 AM Thursday 12 - December 2024

ಮನೆಗೆ ನುಗ್ಗಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ | ಪತ್ನಿಯ ಸ್ಥಿತಿ ಗಂಭೀರ

congress leader
16/10/2021

ರಾಮಗಢ: ಕಾಂಗ್ರೆಸ್ ಮುಖಂಡರೋರ್ವರನ್ನು ಅವರ ಮನೆಗೆ ನುಗ್ಗಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್ ನ ರಾಮಗಢ ಜಿಲ್ಲೆಯಲ್ಲಿ ನಡೆದಿದ್ದು, ಕಿಟಕಿ ಮೂಲಕ ಮನೆಯೊಳಗೆ ನುಗ್ಗಿದ ಹಂತಕರು ಈ ದುಷ್ಕೃತ್ಯ ನಡೆಸಿದ್ದಾರೆ.

ಕಾಂಗ್ರೆಸ್ ನ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ 60 ವರ್ಷ ವಯಸ್ಸಿನ ಕಮಲೇಶ್ ನಾರಾಯಣ ಶರ್ಮಾ ಹತ್ಯೆಯಾದವರಾಗಿದ್ದಾರೆ. ಅವರ ಪತ್ನಿ ಚಂಚಲಾ ಶರ್ಮಾ ಅವರ ಮೇಲೆ ಕೂಡ ಘೋರ ದಾಳಿ ನಡೆಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕಿ ಅಂಬಾ ಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಜೊತೆಗೆ ಮಾತನಾಡಿ ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸುವಂತೆ ಒತ್ತಾಯಿಸುವುದಾಗಿ  ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಕದ್ರಿ ಐತಿಹಾಸಿಕ ಬೌದ್ಧ ಸ್ಥಳ ವೀಕ್ಷಣೆ: 54 ಬೌದ್ಧ ಬಿಕ್ಕುಗಳ ಕರಾವಳಿ ಪ್ರವಾಸ

“ಬಸ್ಸಿನಲ್ಲಿ ಓಡಾಡುತ್ತಿದ್ದ ಬಜರಂಗದಳದ ಕಾರ್ಯಕರ್ತ ಸಿ.ಟಿ.ರವಿ ಕೋಟಿ ರವಿ ಆಗಿದ್ದು ಹೇಗೆ?”

ಕೇರಳದಲ್ಲಿ ಮತ್ತೆ ಜಲಪ್ರಳಯದ ಭೀತಿ: ಬಿಟ್ಟು ಬಿಡದಂತೆ ಸುರಿಯುತ್ತಿದೆ ಭಾರೀ ಮಳೆ | ಮೂವರು ಬಲಿ

ನಾನೇ ಕಾಂಗ್ರೆಸ್ ನ ಪೂರ್ಣಾವಧಿ ಅಧ್ಯಕ್ಷೆ | ನಾಯಕತ್ವದ ಗೊಂದಲಕ್ಕೆ ತೆರೆ ಎಳೆದ ಸೋನಿಯಾ ಗಾಂಧಿ

ಲಾಡ್ಜ್ ನಲ್ಲಿ ದಸರ ಪಾರ್ಟಿಯ ವೇಳೆ ಸ್ನೇಹಿತರ ನಡುವೆ ಗಲಾಟೆ: ಓರ್ವನ ಬರ್ಬರ ಹತ್ಯೆ

ಉಡುಪಿ: ‘ದುರ್ಗಾ ದೌಡ್’ ಮೆರವಣಿಗೆಯಲ್ಲಿ ಹಿಂದೂ ಜಾಗರಣ ಕಾರ್ಯಕರ್ತರಿಂದ ತಲವಾರು ಪ್ರದರ್ಶನ

ದೇವಸ್ಥಾನದ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ಗುಂಡು ಹಾರಿಸಿ ಕೊಂದ ಯುವಕರು !

ಇತ್ತೀಚಿನ ಸುದ್ದಿ