ಮನೆಗೆ 1 ಕಿ.ಮೀ. ದೂರವಿರುವಾಗಲೇ ನಡೆಯಿತು ಅಪಘಾತ | ತಾಯಿ, ಮಗ ಇಬ್ಬರೂ ಸಾವು - Mahanayaka
4:16 AM Wednesday 11 - December 2024

ಮನೆಗೆ 1 ಕಿ.ಮೀ. ದೂರವಿರುವಾಗಲೇ ನಡೆಯಿತು ಅಪಘಾತ | ತಾಯಿ, ಮಗ ಇಬ್ಬರೂ ಸಾವು

mysore
06/10/2021

ಮೈಸೂರು: ಕಾರಿನ ಟಯರ್ ಸ್ಫೋಟಗೊಂಡು ಲೈಟ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ತಾಯಿ, ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರೋಡ್ ನಲ್ಲಿ ನಡೆದಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ.

12 ವರ್ಷ ವಯಸ್ಸಿನ ದೈವಿಕ್ ಹಾಗೂ 35 ವರ್ಷ ವಯಸ್ಸಿನ ಗುಣಲಕ್ಷ್ಮೀ ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಕಾರು ಚಾಲನೆ ಮಾಡುತ್ತಿದ್ದ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಲಿಸುತ್ತಿದ್ದ ಕಾರಿನ ಮುಂಭಾಗದ ಟಯರ್ ಸ್ಫೋಟಗೊಂಡಿದ್ದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಇಂದು ಮುಂಜಾನೆ 4:30 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮನೆಗೆ ಒಂದು ಕಿ.ಮೀ ದೂರದಲ್ಲಿರುವಾಗ ಅಪಘಾತವಾಗಿದೆ. ಕಾರಿನ ಮುಂಭಾಗದ ಗಾಜಿಗೆ ಡಿಕ್ಕಿ ಹೊಡೆದು ಗುಣಲಕ್ಷ್ಮಿ ಸಾವನ್ನಪ್ಪಿದ್ದಾರೆ. ಹಿಂಬದಿ ಸೀಟ್​ನಲ್ಲಿ ಕುಳಿತಿದ್ದ ಪುತ್ರ ದೈವಿಕ್ ಕೂಡ ಮೃತಪಟ್ಟಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಗ್ರಾಹಕರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್: LPG ಸಿಲಿಂಡರ್ ಗೆ 15 ರೂಪಾಯಿ ಏರಿಕೆ

ಅಮಾನವೀಯ ಘಟನೆ: ರಾತ್ರೋ ರಾತ್ರಿ ಮನೆಯಲ್ಲಿದ್ದವರನ್ನ ಹೊರದಬ್ಬಿ ಬೀಗ ಜಡಿದ ಬ್ಯಾಂಕ್ ಸಿಬ್ಬಂದಿ!

ಏಕಾಏಕಿ ಕೈಕೊಟ್ಟ Jio ನೆಟ್ ವರ್ಕ್ |  ಗ್ರಾಹಕರು ಕಂಗಾಲು

ಆರೆಸ್ಸೆಸ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ಅಜ್ಞಾನ, ಭೀತಿ, ವೈಯಕ್ತಿಕ ಹತಾಶೆಯಾಗಿದೆ | ಬಿ.ವೈ.ವಿಜಯೇಂದ್ರ ಕಿಡಿ

ಅತ್ಯಾಚಾರ ನಡೆದು ಕೇವಲ 9 ದಿನಗಳಲ್ಲಿಯೇ ಅಪರಾಧಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

ಮಾಟ ಮಂತ್ರದಿಂದ ನೆಮ್ಮದಿ ಪಡೆಯಲು ಹೋಗಿ 4.41 ಕೋಟಿ ರೂಪಾಯಿ ಕಳೆದುಕೊಂಡ ಮಹಿಳೆ

ಟಿಎಂಸಿ ಸೇರ್ಪಡೆಗೂ ಮುನ್ನ ಕೇಶಮುಂಡನ ಮಾಡಿ ಆತ್ಮಶುದ್ಧಿ ಮಾಡಿಕೊಂಡ ಬಿಜೆಪಿ ಶಾಸಕ!

ಇತ್ತೀಚಿನ ಸುದ್ದಿ