ಯಾರದ್ದೋ ಮನೆಯ ಹಾಸಿಗೆಯಲ್ಲಿ ವೃದ್ಧೆಯನ್ನು ಮಲಗಿಸಿ ಬಂದ ಆಸ್ಪತ್ರೆ ಸಿಬ್ಬಂದಿ!

old woman
21/04/2021

ಲಂಡನ್: ಕೊರೊನಾ ಸೃಷ್ಟಿಸಿರುವ ಅವಾಂತರ ಒಂದಲ್ಲ ಎರಡಲ್ಲ, ಇಲ್ಲೊಬ್ಬರು ವೃದ್ಧೆಯನ್ನು ಆಸ್ಪತ್ರೆ ಸಿಬ್ಬಂದಿ ಯಾರದ್ದೋ ಮನೆಯ ಹಾಸಿಗೆಯಲ್ಲ ಮಲಗಿಸಿ ಬಂದ ಘಟನೆ ನಡೆದಿದೆ.

 

89 ವರ್ಷದ ಎಲಿಜಬೆತ್ ಮಹೋನಿ ಎಂಬವರು ಕೊರೊನಾದಿಂದ ಬಳಲಿದ್ದು, ಒಂದು ವಾರ 10 ದಿನಗಳ ಕಾಲ ಪೊಂಟಿಪೂಲ್‌ ನ ಕೌಂಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

 

ಮಾರ್ಚ್ 12ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಅವರ ಮನೆಯವರಿಗೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿ, ಎಲಿಜಬೆತ್ ಮಹೋನಿ ಅವರನ್ನು ಕರೆತರುತ್ತಿದ್ದೇವೆ ಎಂದು ಹೇಳಿದ್ದಾರೆ.

 

ಮನೆಯವರು ಎಷ್ಟು ಹೊತ್ತಿನಿಂದ ವೃದ್ಧೆಗಾಗಿ ಕಾದರೂ ವೃದ್ಧೆಯ ಸುಳಿವೇ ಇರಲಿಲ್ಲ. ಇದರಿಂದ ಗಾಬರಿಗೊಂಡು ವಿಚಾರಿಸಿದಾಗ ವೃದ್ಧೆಯನ್ನು 12-13 ಕಿ.ಮೀ. ದೂರದಲ್ಲಿರುವ ಯಾರದ್ದೋ ಮನೆಯ ಹಾಸಿಗೆಯಲ್ಲಿ ಮಲಗಿಸಿ ಸಿಬ್ಬಂದಿ ಹೊರಟು ಹೋಗಿದ್ದಾರೆ ಎನ್ನುವುದು ತಿಳಿದು ಬಂದಿದೆ.

 

ಈ ವಿಚಾರ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಸಿಬ್ಬಂದಿ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ವಾಪಸ್ ಕರೆತಂದು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಅಂತೂ ಕೊರೊನಾದಿಂದಾಗಿ ಪ್ರಪಂಚದಾದ್ಯಂತ ವಿತ್ರವಿಚಿತ್ರ ಘಟನೆಗಳು ನಡೆಯುತ್ತಿವೆ.

ಇತ್ತೀಚಿನ ಸುದ್ದಿ

Exit mobile version