ಮನೆಯ ಜಗುಲಿಯಲ್ಲಿ ವೃದ್ಧೆಯ ಮೃತದೇಹ | ಕೊರೊನಾ ಭಯದಿಂದ ಸ್ವಂತ ಮಕ್ಕಳೂ ಸಮೀಪ ಹೋಗಲಿಲ್ಲ - Mahanayaka

ಮನೆಯ ಜಗುಲಿಯಲ್ಲಿ ವೃದ್ಧೆಯ ಮೃತದೇಹ | ಕೊರೊನಾ ಭಯದಿಂದ ಸ್ವಂತ ಮಕ್ಕಳೂ ಸಮೀಪ ಹೋಗಲಿಲ್ಲ

mandya
24/04/2021

ಮಂಡ್ಯ: 55 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಮೃತಪಟ್ಟಿದ್ದು, ಕೊರೊನಾದಿಂದ ಸಾವನ್ನಪ್ಪಿರಬಹುದು ಎಂಬ ಶಂಕೆಯಿಂದ ಸ್ವಂತ ಮಕ್ಕಳೇ ಶವದ ಬಳಿಗೆ ತೆರಳದೇ ದೂರ ನಿಂತಿರುವ ಘಟನೆ  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ  ನಡೆದಿದೆ.


Provided by

ಶೆಟ್ಟಹಳ್ಳಿ ಗ್ರಾಮದ 55 ವರ್ಷ ವಯಸ್ಸಿನ ವೃದ್ಧೆ ಶಿವಮ್ಮ ಅವರಿಗೆ ಉಸಿರಾಟದ ಸಮಸ್ಯೆ ಇತ್ತು. ಇಂದು ಬೆಳಗ್ಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾದ ಕಾರಣ  ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗಮಧ್ಯೆ  ಶಿವಮ್ಮ ಸಾವನ್ನಪ್ಪಿದ್ದಾರೆ.

ಶಿವಮ್ಮ ಮೃತಪಟ್ಟಿರುವುದನ್ನು ದೃಢಪಡಿಸಿದ ಆರೋಗ್ಯ ಸಿಬ್ಬಂದಿ ಮೃತದೇಹವನ್ನು ಮನೆಯ ಜಗುಲಿಯ ಮೇಲೆ ಇಟ್ಟು ತೆರಳಿದ್ದಾರೆ.  ಬೆಳಗ್ಗೆ ಮೃತದೇಹವನ್ನಿಟ್ಟರೂ ಮನೆ ಮಂದಿಯೇ ಮೃತದೇಹದ ಬಳಿಗೆ ಹೋಗುತ್ತಿಲ್ಲ. ಸ್ವಂತ ಮಕ್ಕಳು ತಾಯಿಯ ಬಳಿ ಹೋಗಿಲ್ಲ. ಸ್ಥಳೀಯರಂತೂ ಮನೆ ಸಮೀಪವೂ ಸುಳಿದಿಲ್ಲ. ವೃದ್ಧೆಯ ಮೃತದೇಹ ಮನೆಯ ಜಗುಳಿ ಮೇಲೆ ಮಲಗಿಸಿದ ಸ್ಥಿತಿಯಲ್ಲಿದೆ.


Provided by

ವೃದ್ಧೆಗೆ ಕೊರೊನಾ ಟೆಸ್ಟ್ ಮಾಡಿಸಿ ನಾಲ್ಕು ದಿನಗಳಾದರೂ ಕೊರೊನಾ ಟೆಸ್ಟ್ ರಿಪೋರ್ಟ್ ಬಂದಿಲ್ಲ ಎಂದು ಹೇಳಲಾಗಿದೆ. ವೃದ್ಧೆ ಕೊರೊನಾದಿಂದಲೇ ಮೃತಪಟ್ಟಿರಬಹುದು ಎಂದು ಜನರು ಮೃತದೇಹದ ಬಳಿ ಬರುತ್ತಿಲ್ಲ. ಬದುಕಿರುವ ವೇಳೆ, ನೀನು ಹಿಂದುವೋ, ಮುಸ್ಲಿಮನೋ, ಅನ್ಯಕೋಮಿನವನೋ, ಅನ್ಯಜಾತಿಯವನೋ ಎಂದು ಕೇಳುವ ಜನರು ಸಾವಿನಲ್ಲಿ ಎಷ್ಟೊಂದು ಸ್ವಾರ್ಥ ತೋರಿಸುತ್ತಾರೆ ಅಲ್ಲವೇ? ನಿಜಕ್ಕೂ ಈ ಘಟನೆ ಬಹಳ ಅಮಾನವೀಯವಾಗಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ