ಮನೆಯ ಮೇಲೆ ಬೃಹದಾಕಾರದ ಹುಣಸೆಮರ: ತಾಯಿ ಮಗನ ಸ್ಥಿತಿ ಗಂಭೀರ
ಶಿವಮೊಗ್ಗ: ಮನೆಯ ಮೇಲೆ ಬೃಹದಾಕಾರದ ಹುಣಸೆಮರ ಬಿದ್ದು ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗದ ಸೊರಬ ತಾಲೂಕಿನ ಕತವಾಯಿ ಗ್ರಾಮದಲ್ಲಿ ನಡೆದಿದೆ.
ಕತವಾಯಿ ಗ್ರಾಮದ ಕಾಮಾಕ್ಷಮ್ಮ ಹಾಗೂ ದೇವರಾಜ ಗಾಯಗೊಂಡವರಾಗಿದ್ದಾರೆ. ಇಂದು ಬೆಳಗ್ಗೆ ಭಾರೀ ಗಾಳಿ ಮಳೆಗೆ ಕಾಮಾಕ್ಷಮ್ಮ ಅವರ ಮನೆ ಮೇಲೆ ಬೃಹದಾಕಾರದ ಹುಣಸೆಮರ ಹಾಗೂ ಎರಡು ತೆಂಗಿನ ಮರಗಳು ಬಿದ್ದಿದೆ.
ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ತಾಯಿ ಮಗ ಗಂಭೀರ ಗಾಸ್ಥಿತಿಯಲ್ಲಿದ್ದರು. ಅವರನ್ನು ಮೊದಲು ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka