ರಾತ್ರಿ ವೇಳೆ ಮನೆಯಿಂದ ಹೊರ ಹೋಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ!
ಬೆಳ್ತಂಗಡಿ: ಪುದುವೆಟ್ಟು ಗ್ರಾಮದ ನೂರ್ಲಾಲು ನಿವಾಸಿ ರಜನ್ ಸಾಹೇಬ್(60)ಎಂಬವರು ಮನೆಯ ಸಮೀಪದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ರವಿವಾರ ರಾತ್ರಿ ಮನೆಯಿಂದ ಎದ್ದು ಹೊರ ನಡೆದಿದ್ದರು ಎನ್ನಲಾಗಿದ್ದು, ಸೋಮವಾರ ಇವರಿಗಾಗಿ ಹುಡುಕಾಟ ನಡೆಸಿದಾಗ ಪಕ್ಕದ ಹಾಮದ್ ಸಾಹೇಬ್ ಅವರ ಕೆರೆಯಲ್ಲಿ ಅವರ ದೇಹ ತೇಲುತ್ತಿದ್ದ ರೀತಿಯಲ್ಲಿ ಪತ್ತೆಯಾಗಿದೆ.
ಹಲವು ವರ್ಷಗಳಿಂದ ಮಾನಸಿಕ ಖಾಯಿಲೆಗೆಗೆ ಔಷಧಿ ಸೇವಿಸುತ್ತಿದ್ದ ಅವರಿಗೆ ಮಧ್ಯೆ ಮಧ್ಯೆ ಒಮ್ಮೊಮ್ಮೆ ಆರೋಗ್ಯ ಏರುಪೇರಾಗುತ್ತಿತ್ತು ಎನ್ನಲಾಗಿದೆ.
ಮೃತರು ಪತ್ನಿ ಫಾತಿಮಾ, ಮಕ್ಕಳಾದ ಮುಸ್ತಫಾ, ರಫೀಕ್ ಮತ್ತು ನಿಶ್ಮಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka