ಮನೆಯಿಂದ ಹೊರ ಬರುವ ಮೊದಲು ಈ ಸುದ್ದಿ ಓದಿ: ನಿಮ್ಮ ವಾಹನ ಜಪ್ತಿಯಾಗಬಹುದು! - Mahanayaka
12:03 PM Thursday 14 - November 2024

ಮನೆಯಿಂದ ಹೊರ ಬರುವ ಮೊದಲು ಈ ಸುದ್ದಿ ಓದಿ: ನಿಮ್ಮ ವಾಹನ ಜಪ್ತಿಯಾಗಬಹುದು!

basavaraj bommai
20/05/2021

ಬೆಂಗಳೂರು: ಜನರು ಲಾಕ್ ಡೌನ್ ಪಾಲನೆ ಮಾಡುತ್ತಿಲ್ಲ, ಅನಗತ್ಯವಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ಗೃಹ ಇಲಾಖೆ ಸಜ್ಜಾಗಿದೆ. ಅನಗತ್ಯವಾಗಿ ಓಡಾಡುತ್ತಿರುವವರ ವಾಹನಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಈ ನಿಯಮ ತರಲಾಗುವುದು ಎಂದು ಬೊಮ್ಮಾಯಿ ಸೂಚನೆ ನೀಡಿದ್ದು, ವಾಹನ ಸವಾರರಿಗೆ ಕೇವಲ ದಂಡ ವಿಧಿಸುವುದು ಮಾತ್ರವಲ್ಲದೇ ವಾಹನವನ್ನೂ ಜಪ್ತಿ ಮಾಡಲು ತಿಳಿಸಿದ್ದಾರೆ.

ಲಾಕ್ ಡೌನ್ ಯಶಸ್ವಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಆದರೆ, ರಾಜ್ಯ ಸರ್ಕಾರ ಅಗತ್ಯ ವಸ್ತುಗಳಿಗಾಗಿ ಜನರು ಹೊರ ಬರಬಹುದು ಎಂದು ಹೇಳಿದೆ. ವೈದ್ಯಕೀಯ ಸೌಲಭ್ಯಕ್ಕಾಗಿ ಹೊರ ಬರಬಹುದು ಎಂದು ಹೇಳಿದೆ. ಆದರೆ ಕೆಲವರು ಇದನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ.

ಇನ್ನೂ ಲಾಕ್ ಡೌನ್ ಯಶಸ್ವಿಗೆ ಗೃಹ ಸಚಿವರು ವಾಹನ ಜಪ್ತಿಗೆ ಆದೇಶ ನೀಡಿರುವುದು ಸೂಕ್ತ ಕ್ರಮ ಎಂದು ಹೇಳಲು ಸಾಧ್ಯವಿಲ್ಲ. ಲಾಕ್ ಡೌನ್ ಆರಂಭದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಂಘರ್ಷ ಉಂಟಾಗಿರುವುದನ್ನು ಸಚಿವರು ಗಮನಿಸಬೇಕು. ಪೊಲೀಸರು ಯಾವುದೇ ವಿಚಾರಣೆ ನಡೆಸದೇ ಸಾರ್ವಜನಿಕರ ವಾಹನಗಳಲ್ಲಿ ಜಪ್ತಿ ಮಾಡುವುದರಿಂದಾಗಿ ಅಮಾಯಕರು ತಮ್ಮ ವಾಹನಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕೂಡ ಇರುತ್ತವೆ. ಅನಗತ್ಯವಾಗಿ ಹೊರ ಬರುವವರಿಗಿಂತಲೂ, ಅಗತ್ಯಗಳಿಗಾಗಿ ಹೊರ ಬರುವವರು ಸಮಸ್ಯೆಗೆ ಸಿಲುಕದಂತೆ ನೋಡುವುದು ಕೂಡ ಪೊಲೀಸರ ಜವಾಬ್ದಾರಿಯಾಗಿದೆ.




ಇತ್ತೀಚಿನ ಸುದ್ದಿ