ಹೃದಯ ವಿದ್ರಾವಕ ಘಟನೆ: ಮನೆಯೊಂದಿಗೆ ಸುಟ್ಟು ಭಸ್ಮವಾದ 70ರ ವೃದ್ಧ - Mahanayaka
11:12 PM Monday 23 - December 2024

ಹೃದಯ ವಿದ್ರಾವಕ ಘಟನೆ: ಮನೆಯೊಂದಿಗೆ ಸುಟ್ಟು ಭಸ್ಮವಾದ 70ರ ವೃದ್ಧ

tumkur news
11/08/2021

ತುಮಕೂರು:  ಮನೆಗೆ ಬೆಂಕಿ ತಗಲಿದ ಪರಿಣಾಮ 70 ವರ್ಷ ವಯಸ್ಸಿನ ವೃದ್ಧರೊಬ್ಬರು ಸಜೀವ ದಹನಗೊಂಡು ಸಾವಿಗೀಡಾದ ಘಟನೆ ತುಮಕೂರಿನ ಅಸಲೀಪುರದಲ್ಲಿ ನಡೆದಿದ್ದು, ಒಬ್ಬಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಇದೀಗ ಬೆಂಕಿ ಅನಾಹುತಕ್ಕೆ ಬಲಿಯಾಗಿದ್ದಾರೆ.

70 ವರ್ಷ ವಯಸ್ಸಿನ ವೃದ್ಧ ದೊಡ್ಡಬಸವಯ್ಯ ಮೃತಪಟ್ಟವರಾಗಿದ್ದು, ಇವರಿಗೆ ಎರಡು ಮದುವೆಯಾಗಿದ್ದರೂ, ಮೊದಲ ಪತ್ನಿ ಇವರನ್ನು ಬಿಟ್ಟು ಹೋಗಿದ್ದು, ಎರಡನೇ ಪತ್ನಿ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಹೀಗಾಗಿ ಈಕೆ ಮನೆಯಲ್ಲಿರುವುದಿಲ್ಲ ಎಂದು ಹೇಳಲಾಗಿದೆ.  ದೊಡ್ಡಬಸವಯ್ಯಗೆ ಸರಿಯಾಗಿ ಕಣ್ಣು ಕೂಡ ಕಾಣಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.

ಇವರ ಮನೆಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಹೀಗಾಗಿ ರಾತ್ರಿ ಮಲಗುವಾಗ ಪ್ರತಿ ದಿನ ದೀಪವನ್ನು ಹಚ್ಚಿ ಪಕ್ಕದಲ್ಲಿಟ್ಟುಕೊಂಡು ಮಲಗುತ್ತಿದ್ದರು ಎನ್ನಲಾಗಿದೆ. ರಾತ್ರಿ ದೀಪ ಮಗುಚಿ ಬಿದ್ದು, ತೆಂಗಿನ ಮಟ್ಟೆಯ ಚೀಲಕ್ಕೆ ಬೆಂಕಿ ವ್ಯಾಪಿಸಿದ್ದು, ವೃದ್ಧರಾಗಿರುವ ದೊಡ್ಡಬಸವಯ್ಯ ಅವರ ಗಮನಕ್ಕೆ ಅಷ್ಟು ಬೇಗ ಈ ಘಟನೆ ಬಂದಿರಲಿಕ್ಕಿಲ್ಲ ಎನ್ನಲಾಗಿದೆ.

ಬೆಂಕಿಯ ಕೆನ್ನಾಲಿಗೆ ಮನೆಯಿಡೀ ವ್ಯಾಪಿಸಿದ್ದು, ಈ ವೇಳೆ ಮನೆಯ ಜೊತೆಗೆ ದೊಡ್ಡಬಸವಯ್ಯ ಅವರು ಕೂಡ ದಹಿಸಿ ಹೋಗಿದ್ದಾರೆ. ಬೆಂಕಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು ಅವಕಾಶವೂ ಅವರಿಗೆ ಸಿಕ್ಕಿರಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಇನ್ನಷ್ಟು ಸುದ್ದಿಗಳು…

ನೀರಜ್ ಚೋಪ್ರಾರನ್ನು ಅನುಕರಿಸಿ ರೋಡಲ್ಲಿ ನಿಂತು ಈಟಿ ಎಸೆದ ರಾಖಿ ಸಾವಂತ್ | ಮುಂದೇನಾಯ್ತು?

ಎಸೆಸೆಲ್ಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದ ವಿದ್ಯಾರ್ಥಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!

ಮಾತುಬಾರದ, ಕಿವಿ ಕೇಳದ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ!

ಕರಾಟೆ ಬೆಲ್ಟ್ ನಿಂದ ತಾಯಿಯ ಕತ್ತು ಹಿಸುಕಿ ಕೊಂದ ಬಾಲಕಿ!

ಹೂಗುಚ್ಛ, ಹಾರ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ | ಕನ್ನಡ ಪುಸ್ತಕ ಕೊಡಲು ಆದೇಶ

SSLC Exam result 2021 | ಓರ್ವ ವಿದ್ಯಾರ್ಥಿಯನ್ನು ಹೊರತುಪಡಿಸಿ, ಎಲ್ಲರೂ ಪಾಸ್

ಇತ್ತೀಚಿನ ಸುದ್ದಿ