ಬಿಗ್ ಬ್ರೇಕಿಂಗ್ ನ್ಯೂಸ್: ಬೆಳಗಾವಿ ಬಿಜೆಪಿಗೆ: ಮಂಗಳ ಅಂಗಡಿಗೆ ಭರ್ಜರಿ ಜಯ
02/05/2021
ಬೆಳಗಾವಿ: ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಭರ್ಜರಿ ಜಯಗಳಿಸಿದ್ದಾರೆ. ತೀವ್ರ ಹಿನ್ನಡೆ ಸಾಧಿಸಿದ್ದ ಮಂಗಳ ಅಂಗಡಿ ಕೊನೆಯ ಕ್ಷಣಗಳಲ್ಲಿ ಮುನ್ನಡೆ ಸಾಧಿಸಿದ್ದು, ಇದೀಗ ಗೆಲುವು ಸಾಧಿಸಿದ್ದಾರೆ.
ಸತತ ಲೀಡ್ ಪಡೆದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು, ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿಯೇ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಕೊನೆಯ ಕ್ಷಣಗಳಲ್ಲಿ 50-50 ಗೆಲುವಿನ ಸಾಧ್ಯತೆ ಕಂಡು ಬಂದಿತ್ತು.
ಸುಮಾರು 35 ಸುತ್ತುಗಳಲ್ಲಿ ಸತೀಶ್ ಜಾರಕಿಹೊಳಿ ಅವರು ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ 80 ಸುತ್ತಿನ ನಂತರ ಮತ ಅಂತರ ಕಡಿಮೆ ಮಾಡಿಕೊಂಡ ಬಂದ ಮಂಗಳಾ ಅಂತಿಮ ಗೆಲುವು ದಾಖಲಿಸಿದ್ದಾರೆ.