ಸತೀಶ್ ಜಾರಕಿಹೊಳಿಗೆ ಹಿನ್ನಡೆ, ಮಂಗಳಾ ಅಂಗಡಿ ಮುನ್ನಡೆ - Mahanayaka
10:09 PM Thursday 12 - December 2024

ಸತೀಶ್ ಜಾರಕಿಹೊಳಿಗೆ ಹಿನ್ನಡೆ, ಮಂಗಳಾ ಅಂಗಡಿ ಮುನ್ನಡೆ

congress bjp
02/05/2021

ಬೆಂಗಳೂರು: ಇಂದು ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಇನ್ನೊಂದೆಡೆ ಕರ್ನಾಟಕದಲ್ಲಿ  ಒಂದು ಲೋಕಸಭಾ ಕ್ಷೇತ್ರ ಹಾಗೂ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ.

ಸದ್ಯದ ಫಲಿತಾಂಶದ ಪ್ರಕಾರ . ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಜಿದ್ದಾ ಜಿದ್ದಿನ ಹೋರಾಟ ನಡೆದಿದೆ.

ಬೆಳಗಾವಿಯಲ್ಲಿ 10ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ 1571 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ಇದೀಗ ಅವರಿಗೆ ಹಿನ್ನಡೆಯಾಗಿದೆ.  ಮಂಗಳ ಅಂಗಡಿ 21ನೇ ಸುತ್ತಿನ ಮತ ಎಣಿಕೆಯ ವೇಳೆ 2,245 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬಿಜೆಪಿಯ ಅಭ್ಯರ್ಥಿ ಮಂಗಳ ಅಂಗಡಿ 24820 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ನ ಅಭ್ಯರ್ಥಿ ಸತೀಶ್ ಜಾರಕಿಹೊಳಿಯವರು 25575 ಮತ ಗಳಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಮೂರನೇ ಸ್ಥಾನದಲ್ಲಿ ಇದ್ದಾರೆ.

ಇತ್ತೀಚಿನ ಸುದ್ದಿ