ಮಂಗಳ ಗ್ರಹದಲ್ಲಿ ಜೀವಿಗಳಿದ್ದವು ಎನ್ನುವುದಕ್ಕೆ ಸಿಕ್ಕಿದೆ ಬಲವಾದ ಸಾಕ್ಷಿ!
ವಾಷಿಂಗ್ಟನ್: ಮಂಗಳನ ಅಂಗಳದಲ್ಲಿ ಜೀವಿಗಳಿವೆಯೇ ಎನ್ನುವ ಬಗ್ಗೆ ನಾಸಾ ಅಧ್ಯಯನ ನಡೆಸುತ್ತಿದ್ದು, ಇದೀಗ ನಾಸಾದ ಪರ್ಸಿವಿರೆನ್ಸ್ ರೋವರ್ ಇದೇ ಮೊದಲ ಬಾರಿಗೆ ಮಂಗಳನ ಅಂಗಳದಿಂದ ಕಲ್ಲು, ಮಣ್ಣುಗಳ ಮಾದರಿಯನ್ನು ಸಂಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ನಾಸಾ ಯೋಜನಾ ವಿಜ್ಞಾನಿ ಕೆನ್ ಪಾರ್ಲಿ, ಸದ್ಯ ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಪರ್ಸಿವಿರೆನ್ಸ್ ರೋವರ್ ಅಗೆದಿರುವ ಕಲ್ಲಿನ ಮಾದರಿಯಲ್ಲಿ ಮಂಗಳನ ಅಂಗಳದಲ್ಲಿ ಬಹಳ ಹಿಂದೆ ಭೂಮಿಯ ವಾತಾವರಣ ಇತ್ತು ಎನ್ನುವ ಅನುಮಾನಕ್ಕೆ ಬಲವಾದ ಸಾಕ್ಷ್ಯಾಧಾರ ನೀಡಲಿದೆ. ಅಲ್ಲಿ ನೀರು ಕೂಡ ಇತ್ತು ಎನ್ನುವ ಸಂದೇಹದ ಬಗ್ಗೆಯೂ ಉತ್ತರ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಅನ್ಯ ಗ್ರಹದಲ್ಲಿ ಬಂಡೆಯನ್ನು ಕೊರೆದು ಅದರ ಮಾದರಿಯನ್ನು ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗಿದೆ. ಸೆಪ್ಟಂಬರ್ 1ರಂದು ರೋವರ್ ಕಲ್ಲಿನ ಮಾದರಿಯನ್ನು ಸಂಗ್ರಹಿಸಿದೆ.
ಇನ್ನೂ ಮಂಗಳನ ಬಗ್ಗೆ ಭಾರತ ಕೂಡ ಅಧ್ಯಯನ ನಡೆಸುತ್ತಿದೆ. ನವೆಂಬರ್ 5, 2013ರಂದು ಮಂಗಳಯಾನ ಯೋಜನೆಯ ಅಂಗವಾಗಿ ಇಸ್ರೋ ಮಾರ್ಸ್ ಆರ್ಬಿಟರ್ ಮಿಷನ್ ನ್ನು ಕಳುಹಿಸಿತ್ತು. ಅದು ಯಶಸ್ವಿಯಾಗಿ 2014 ಸೆಪ್ಟೆಂಬರ್ 24ರಂದು ಮಂಗಳನ ಕಕ್ಷೆಗೆ ಸೇರಿತ್ತು. ಈಗಲೂ ಅದು ಕೆಲಸ ಮಾಡುತ್ತಿದೆ.
ಇನ್ನಷ್ಟು ಸುದ್ದಿಗಳು…
ನೀರಲ್ಲಿ ಮುಳುಗಿದ ಮಕ್ಕಳು “ಅಪ್ಪಾ… ಕಾಪಾಡು” ಎಂದು ಕರೆದರೂ ಕಾಪಾಡಲಾಗಲಿಲ್ಲ | ನೊಂದ ತಂದೆಯಿಂದ ಆತ್ಮಹತ್ಯೆ
ಮಂಗಳೂರು: ಸಮುದ್ರದ ದಡದಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆ
ಹೇಯ ಕೃತ್ಯ: 6 ವರ್ಷದ ಮಗುವಿನ ಮೇಲೆ ಚಿಕ್ಕಪ್ಪನಿಂದಲೇ ಲೈಂಗಿಕ ದೌರ್ಜನ್ಯ
ಆನ್ ಲೈನ್ ಗೆಳೆಯನ ಭೇಟಿಗೆ ತೆರಳಿದ ಯುವತಿಗೆ ಡ್ರಗ್ಸ್ ನೀಡಿ, ಐದು ಮಂದಿಯಿಂದ ಸಾಮೂಹಿಕ ಅತ್ಯಾಚಾರ!
ಉದನೆ ಗಣಪತಿ ಕಟ್ಟೆ ಧ್ವಂಸ: ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ಕಾಂಗ್ರೆಸ್ ಮುಂದಿನ ಎರಡು ದಶಕಗಳ ಕಾಲ ಅಧಿಕಾರಕ್ಕೆ ಬರುವ ಕನಸು ಕಾಣುವ ಅಗತ್ಯವಿಲ್ಲ | ನಳಿನ್ ಕುಮಾರ್ ಕಟೀಲ್
ದೇವಸ್ಥಾನ ತೆರವು: ಹಿಂದೂ ಭಾವನೆಗಳ ವಿರುದ್ಧದ ಕೃತ್ಯ ಎಂದ ಸಿದ್ದರಾಮಯ್ಯ