ಮಂಗಳೂರಿನ ಲಾಡ್ಜ್ ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ | ಬಾಲಕಿಯ ಮುಗ್ಧತೆ ದುರುಪಯೋಗಪಡಿಸಿ ಕೊಂಡು ಕೃತ್ಯ! - Mahanayaka
8:03 PM Wednesday 11 - December 2024

ಮಂಗಳೂರಿನ ಲಾಡ್ಜ್ ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ | ಬಾಲಕಿಯ ಮುಗ್ಧತೆ ದುರುಪಯೋಗಪಡಿಸಿ ಕೊಂಡು ಕೃತ್ಯ!

mangalore news
10/10/2021

ಬಂಟ್ವಾಳ:  ಬಂಟ್ವಾಳದ ಅಮ್ಟಾಡಿಯ ನಿರ್ಜನ ಪ್ರದೇಶದಲ್ಲಿ  ಬಾಲಕಿಯನ್ನು ಅತ್ಯಾಚಾರ ನಡೆಸಲಾಗಿದೆ ಎಂಬ ಬಗ್ಗೆ ದಾಖಲಾದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು,  ಸಂತ್ರಸ್ತೆಯ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಿಗೆ ತನಿಖೆಯ ವೇಳೆ, ಅತ್ಯಾಚಾರ ನಡೆದಿರುವುದು ಮಂಗಳೂರಿನ ಖಾಸಗಿ ಲಾಡ್ಜ್ ನಲ್ಲಿ ಎನ್ನುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾಪು ನಿವಾಸಿ ಕೆ.ಎಸ್.ಶರತ್ ಶೆಟ್ಟಿ, ಮಾರುತಿ ಮಂಜುನಾಥ್, ಲಾಡ್ಜ್ ಸತೀಶ್ ಹಾಗೂ ಹಿದಾಯುತ್ತುಲ್ಲ ಎಂಬ ಕಾಮುಕರನ್ನು ಬಂಧಿಸಿ, ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕಾಪು ನಿವಾಸಿ ಕೆ.ಎಸ್.ಶರತ್ ಶೆಟ್ಟಿ ಎಂಬಾತ ಸಂತ್ರಸ್ತ ಬಾಲಕಿಗೆ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದು, ಬಳಿಕ ಮೊಬೈಲ್  ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಶರತ್ ಶೆಟ್ಟಿ ತನಗೆ ಪರಿಚಯವಾಗಿದ್ದ ಬಾಲಕಿಯನ್ನು ತನ್ನ ಸಂಬಂಧಿ ಮಾರುತಿ ಮಂಜುನಾಥ್ ಎಂಬಾತನಿಗೂ ಪರಿಚಯ ಮಾಡಿಸಿದ್ದಾನೆ. ಆರೋಪಿ ಮಂಜುನಾಥ್ ಬಾಲಕಿಯ ಜೊತೆಗೆ ಅಶ್ಲೀಲ ವಾಟ್ಸಾಪ್ ಚಾಟ್ ಮಾಡುತ್ತಾ ಬಾಲಕಿಯ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡಿದ್ದ.

ಶರತ್ ಶೆಟ್ಟಿ ಬಾಲಕಿಯನ್ನು ಮಂಗಳೂರಿಗೆ ಬರುವಂತೆ ಹೇಳಿದ್ದಾನೆ ಎನ್ನಲಾಗಿದೆ. ಬಾಲಕಿಯನ್ನು ಮಂಗಳೂರಿನ ಸಿಟಿ ಮಹಲ್ ಬಳಿ ಭೇಟಿಯಾದ ಶರತ್ ಶೆಟ್ಟಿ, ಲಾಡ್ಜ್ ನಲ್ಲಿ ವಿಶ್ರಾಂತಿ ಮಾಡೋಣ ಎನ್ನುತ್ತಾ ಪುಸಲಾಯಿಸಿ ಲಾಡ್ಜ್ ವೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಉತ್ತರ ಕನ್ನಡ ಮೂಲದ ಹಿದಾಯುತ್ತುಲ್ಲಾ ಎಂಬಾತನಿಗೆ ಕರೆ ಮಾಡಿದ ಆರೋಪಿ ಶರತ್ ಶೆಟ್ಟಿ ಆತನನ್ನು ಲಾಡ್ಜ್ ಗೆ ಕರೆಸಿದ್ದು, ಆತನೂ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಆರೋಪಿ ಲಾಡ್ಜ್ ಸತೀಶ್ ಲಾಡ್ಜ್ ನಲ್ಲಿ ತಂಗಲು ಅವಕಾಶ ನೀಡಿದ್ದಲ್ಲದೇ,  ಬಾಲಕಿ ತಂಗಿದ್ದ ರೂಮ್ ಗೆ ಬಂದು ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆರೋಪಿ ಮಾರುತಿ ಮಂಜುನಾಥ್ ಬಾಲಕಿಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಆಕೆಯ ಜೊತೆಗೆ ಅಶ್ಲೀಲ ವಿಡಿಯೋ ಚಾಟ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರ ತನಿಖೆ ಇನ್ನೂ ಮುಂದುವರಿದಿದ್ದು, ಹಲವಾರು ವಿಚಾರಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಆರಂಭದಲ್ಲಿ ಈ ಘಟನೆ ಅಮ್ಟಾಡಿಯ ನಿರ್ಜನ ಪ್ರದೇಶದಲ್ಲಿ ನಡೆದಿತ್ತು ಎಂದು ಹೇಳಲಾಗಿತ್ತು. ಆದರೆ, ಇದೀಗ ಈ ಘಟನೆ ಮಂಗಳೂರಿನ ಲಾಡ್ಜ್ ವೊಂದರಲ್ಲಿ ನಡೆದಿದೆ ಎನ್ನುವುದು ತಿಳಿದು ಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ  ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಉಪ ನಿರೀಕ್ಷಿಕರಾದ ಅವಿನಾಶ್, ಪ್ರಸನ್ನ ಮತ್ತಿತರರ ತಂಡ ಭಾಗವಹಿಸಿತ್ತು. ಘಟನೆ ನಡೆದ ತಕ್ಷಣವೇ ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ಗಂಗೊಳ್ಳಿ: ಹಿಂದೂಗಳ ಮೀನುಮಾರುಕಟ್ಟೆಯನ್ನು ಮುಸ್ಲಿಮರು ಬಹಿಷ್ಕರಿಸಿದ್ದು ಯಾಕೆ? | ಒಂದೇ ತಾಯಿ ಮಕ್ಕಳಂತಿದ್ದವರ ನಡುವೆ ಏನಿದು ಗಲಾಟೆ?

“ಧೈರ್ಯವಿದ್ದರೆ ಗುಡ್ಡೆ ಮೈದಾನಕ್ಕೆ ಬಾ” ಎಂದು ಕರೆದು ಸಹೋದರರಿಬ್ಬರ ಮೇಲೆ 20ಕ್ಕೂ ಅಧಿಕ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ!

ರೈಲಿನೊಳಗೆ ಪತಿಯ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಡಕಾಯಿತರು

ಬಂಟ್ವಾಳ: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ನಾಲ್ವರು ಆರೋಪಿಗಳ ಅರೆಸ್ಟ್

ಆರ್ಯನ್ ಖಾನ್ ಭಾಗವಹಿಸಿದ್ದ ಡ್ರಗ್ಸ್ ಪಾರ್ಟಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಜೆಪಿ ನಾಯಕನ ಭಾವನನ್ನು ಬಿಡುಗಡೆ ಮಾಡಲಾಗಿದೆ | ಎನ್‌ ಸಿಪಿ ನಾಯಕ ಗಂಭೀರ ಆರೋಪ

ಮಂಗಳೂರು: ಬಾಲಕಿಯನ್ನು ಅಪಹರಿಸಿ ನಿಗೂಢ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ!

ಇತ್ತೀಚಿನ ಸುದ್ದಿ