ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ: ಪೊಲೀಸರ ದಿಕ್ಕು ತಪ್ಪಿಸಲು ದರೋಡೆಕೋರರು ಮಾಡಿದ ಪ್ಲಾನ್ ಏನು?

kotekar bank
18/01/2025

ಮಂಗಳೂರು: ಉಳ್ಳಾಲದ ಕೋಟೆಕಾರು ಬ್ಯಾಂಕ್ ನಲ್ಲಿ ನಡೆದ ಬ್ಯಾಂಕ್ ದರೋಡೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ಬ್ಯಾಂಕ್ ಗಳ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಇರುವಾಗಲೇ ಈ ಘಟನೆ ನಡೆದಿದ್ದು, ಎಲ್ಲಾ ಅನುಕೂಲತೆಗಳನ್ನು ಗಮನಿಸಿಯೇ ದರೋಡೆಕೋರರು ಕೃತ್ಯ ಎಸಗಿದ್ದಾರೆ ಎನ್ನುವುದು ಸಾಬೀತಾಗಿದೆ.

ಇನ್ನೂ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ದರೋಡೆಕೋರರು ಬಿಗ್ ಪ್ಲಾನ್ ರೆಡಿ ಮಾಡಿಕೊಂಡೇ ವ್ಯವಸ್ಥಿತವಾಗಿ ದರೋಡೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.

ಪೊಲೀಸರನ್ನು ಗೊಂದಲ ಮಾಡಲು ದರೋಡೆಕೋರರು ಒಂದೇ ರೀತಿಯ ಎರಡು ಕಾರುಗಳಲ್ಲಿ ಬಂದಿದ್ದರು ಎಂದು ತಿಳಿದು ಬಂದಿದೆ. ಒಂದು ಕಾರು ಮಂಗಳೂರಿನತ್ತ ತೆರಳಿದರೆ, ಇನ್ನೊಂದು ಕಾರು ಕೇರಳ ಕಡೆಗೆ ಪರಾರಿಯಾಗಿದೆ.

ದರೋಡೆ ನಡೆಸುವ ವೇಳೆ ಸಿಬ್ಬಂದಿಯ ಮೊಬೈಲ್ ಫೋನ್ ಕಸಿದುಕೊಂಡಿದ್ದ ದರೋಡೆಕೋರರು ಮಂಗಳೂರು ನಗರದ ಕಡೆಗೆ ಬಂದು ಮೊಬೈಲ್ ಎಸೆದು ಪರಾರಿಯಾಗಿದ್ದಾರೆ.  ಮಂಗಳೂರು—ಉಡುಪಿ ಗಡಿ ಪ್ರದೇಶವಾದ ಹೆಜಮಾಡಿ ಬಳಿ ಮೊಬೈಲ್  ಎಸೆದು ಹೋಗಿದ್ದು, ಸದ್ಯ ಮೊಬೈಲ್ ಪತ್ತೆಯಾಗಿದೆ.

11 ಲಕ್ಷ ನಗದು ಹಾಗೂ ಚಿನ್ನಾಭರಣ ಸೇರಿ ಒಟ್ಟು 12 ಕೋಟಿ ನಗನಾಣ್ಯ ಲೂಟಿ ಮಾಡಿ ದರೋಡೆಕೋರರು ಪರಾರಿಯಾಗಿದ್ದಾರೆ.  ದರೋಡೆಕೋರರು ಕೇರಳಕ್ಕೆ ಪಲಾಯನ ಮಾಡಿದೆ ಎನ್ನಲಾಗಿತ್ತು. ಆದರೆ ಪೊಲೀಸರ ತನಿಖೆಯ ದಿಕ್ಕುತಪ್ಪಿಸಲು ದರೋಡೆಕೋರರು ಮಾಡಿದ ಪ್ಲಾನ್ ಬೆಳಕಿಗೆ ಬಂದಿದೆ. ಸ್ಥಳೀಯವಾಗಿ ಎಲ್ಲ ವಿವರಗಳನ್ನು ತಿಳಿದೇ ದರೋಡೆ ಮಾಡಲಾಗಿದೆ ಎನ್ನುವ ಅನುಮಾನಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ

Exit mobile version