ದಕ್ಷಿಣ ಕನ್ನಡ:ಒಂದೇ ಕುಟುಂಬದ ನಾಲ್ವರು ಲಾಡ್ಜ್ ನಲ್ಲಿ ಸಾವಿಗೆ ಶರಣು

police
31/03/2023

ದಕ್ಷಿಣ ಕನ್ನಡ: ಲಾಡ್ಜ್‌ ನಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿರುವ ಘಟನೆ ಮಂಗಳೂರು ನಗರದ ಕೆ.ಎಸ್‌. ರಾವ್ ರಸ್ತೆಯ ಕರುಣಾ ಲಾಡ್ಜ್‌ ನಲ್ಲಿ ನಡೆದಿದೆ.

ಸಾವಿಗೆ ಶರಣಾದವರು ಮೈಸೂರು ಮೂಲದವರು ಎನ್ನಲಾಗಿದೆ. ಲಾಡ್ಜ್ ನಲ್ಲಿ ಈ ಕುಟುಂಬ ರೂಮ್ ಮಾಡಿಕೊಂಡಿತ್ತು. ಆದರೆ ಇಂದು ಬೆಳಗ್ಗೆ ಇವರು ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ದೇವೇಂದ್ರ ಎಂಬ ವ್ಯಕ್ತಿ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಮೃತಪಟ್ಟವರು ಎಂದು ತಿಳಿದು ಬಂದಿದೆ.  ಮೃತರು ಮೈಸೂರಿನ ವಿಜಯನಗರದವರು ಎಂದು ತಿಳಿದು ಬಂದಿದೆ.

ಹಣಕಾಸಿನ ಸಮಸ್ಯೆಯಿಂದ ನೊಂದು ಸಾವಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂದರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version