ಬೆಳ್ಳಂಬೆಳಗ್ಗೆ  ದಸರಾ ಶೋಭಾಯಾತ್ರೆ ಸಂಪನ್ನ: ಗಮನ ಸೆಳೆದ ವಿವಿಧ ಕಲಾ ತಂಡಗಳು - Mahanayaka

ಬೆಳ್ಳಂಬೆಳಗ್ಗೆ  ದಸರಾ ಶೋಭಾಯಾತ್ರೆ ಸಂಪನ್ನ: ಗಮನ ಸೆಳೆದ ವಿವಿಧ ಕಲಾ ತಂಡಗಳು

mangalore dasara
06/10/2022

ಮಂಗಳೂರು ದಸರಾ ಹಿನ್ನೆಲೆಯಲ್ಲಿ ರಾತ್ರಿಯಿಂದ ನಗರ ಪ್ರದಕ್ಷಿಣೆ ಮಾಡಿದ್ದ ಶೋಭಾಯಾತ್ರೆ ಇಂದು ಬೆಳ್ಳಂಬೆಳಗ್ಗೆ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸಂಪನ್ನಗೊಂಡಿತು.


Provided by

ಮಂಗಳೂರಿನಲ್ಲಿ ಈ ಬಾರಿ ವೈಭವದ ಶೋಭಾಯಾತ್ರೆ ಕಳೆಗಟ್ಟಿತ್ತು. ಶಾರದೆ, ನವದುರ್ಗೆಯರ ಸಹಿತ, ಮಹಾಗಣಪತಿಯ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ ಕುದ್ರೋಳಿ ಕ್ಷೇತ್ರದಿಂದ ರಾತ್ರಿ ಆರಂಭವಾಯ್ತು. ಈ ಸುಂದರ ಮೂರ್ತಿಗಳನ್ನು ಮಂಗಳೂರು ನಗರದಾದ್ಯಂತ ಶೋಭಾಯಾತ್ರೆ ಮೂಲಕ ಕೊಂಡೊಯ್ದು ಇಂದು ಮುಂಜಾನೆ ವೇಳೆಗೆ ಮತ್ತೆ ಕುದ್ರೋಳಿ ಶ್ರೀಕ್ಷೇತ್ರದ ಪುಷ್ಕರಣಿಯಲ್ಲಿ ನಿಮಜ್ಜನ ಮಾಡಲಾಯಿತು.

ಈ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಟ್ಯಾಬ್ಲೊಗಳು, ಸಂಗೀತ ವಾದ್ಯ ಮೇಳಗಳು, ಮಂಗಳವಾದ್ಯಗಳು, ಭಜನಾ ಸಂಕೀರ್ತನಾ ತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು ಮಂಗಳೂರು ದಸರಾ ವೈಭವದ ಶೋಭಾಯಾತ್ರೆಗೆ ಮೆರುಗು ನೀಡಿದವು.


Provided by

ಶೋಭಾಯಾತ್ರೆ ಸಾಗುವ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕೃತದಿಂದ ಕಂಗೊಳಿಸುತ್ತಿತ್ತು. ಈ ಶೋಭಾಯಾತ್ರೆಗೆ ಮಂಗಳೂರು ಮಾತ್ರವಲ್ಲದೇ, ಹೊರ ರಾಜ್ಯ, ಹೊರ ದೇಶಗಳಿಂದಲೂ ಜನರು ಆಗಮಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ