ರಾತ್ರಿ ವೇಳೆ ಹೊತ್ತಿ ಉರಿದ ಎರಡು ಅಂಗಡಿಗಳು: ಮಂಗಳೂರಿನ ದುಬೈ ಮಾರ್ಕೆಟ್ ನಲ್ಲಿ ಘಟನೆ
ಮಂಗಳೂರು: ನಗರದ ಮಾರ್ಕೆಟ್ ರಸ್ತೆಯ ಸಿಟಿ ಮಾರ್ಕೆಟ್ ಕಟ್ಟಡದಲ್ಲಿರುವ ದುಬೈ ಮಾರ್ಕೆಟ್ ನಲ್ಲಿ ಭಾನುವಾರ ಮುಂಜಾನೆ 2:30ರ ಸುಮಾರಿಗೆ ಅಗ್ನಿ ಅವಘಡ ನಡೆದಿದ್ದು, ಎರಡು ಅಂಗಡಿಗಳು ಸುಟ್ಟು ಭಸ್ಮವಾಗಿವೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಮಾರ್ಕೆಟ್ ನಲ್ಲಿದ್ದ ಗೋದಾಮು ಸಹಿತ ಎರಡು ಅಂಗಡಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಂಗಡಿಯಲ್ಲಿದ್ದ ವಸ್ತುಗಳೆಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಅಪಾರ ನಷ್ಟ ಸಂಭವಿಸಿದೆ.
ಅಗ್ನಿ ಅವಘಡದ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಹಾಗೂ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಇದರಿಂದಾಗಿ ಇನ್ನಷ್ಟು ಅಪಾಯ ತಪ್ಪಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯೋಗಿ ‘ಉಪಯೋಗಿ’ ಎಂದ ಮೋದಿ; ಯೋಗಿ ‘ನಿರುಪಯೋಗಿ’ ಎಂದ ಅಖಿಲೇಶ್ ಯಾದವ್!
ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ!
ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಬಿದ್ದು 2 ವರ್ಷದ ಮಗು ಸಾವು
ಗಂಗಾ ಎಕ್ಸ್ಪ್ರೆಸ್ ವೇ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಶಂಕುಸ್ಥಾಪನೆ
ಭಾರತದ ಕುಸ್ತಿ ಸಂಸ್ಥೆ ಅಧ್ಯಕ್ಷನಿಂದ ಕುಸ್ತಿಪಟುವಿಗೆ ವೇದಿಕೆಯಲ್ಲೇ ಕಪಾಳಮೋಕ್ಷ