ಮಾರ್ಚ್ 10ರಿಂದ ಮಂಗಳೂರು–ಹುಬ್ಬಳ್ಳಿ ವಿಮಾನ ಸೇವೆ ಸ್ಥಗಿತ

indigo
04/03/2023

ಮಂಗಳೂರು: ಇಂಡಿಗೋ ಸಂಸ್ಥೆಯಿಂದ  ಕಳೆದ ವರ್ಷದ ಮೇ ತಿಂಗಳಲ್ಲಿ ಆರಂಭಗೊಂಡಿದ್ದ ಮಂಗಳೂರು–-ಹುಬ್ಬಳ್ಳಿ ನಡುವಿನ ವಿಮಾನ ಸೇವೆ ಇದೇ ತಿಂಗಳ 10ರಿಂದ ಸ್ಥಗಿತಗೊಳ್ಳಲಿದೆ.

ಸೋಮವಾರ, ಬುಧವಾರ, ಶುಕ್ರವಾರ ಈ ಮಾರ್ಗದಲ್ಲಿ ನೇರ ವಿಮಾನ ಸೇವೆ ಇತ್ತು. ಸಂಜೆ 6:30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ವಿಮಾನ ರಾತ್ರಿ 7:35ಕ್ಕೆ ಮಂಗಳೂರು ತಲುಪುತ್ತಿತ್ತು.

ಮಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು ರಾತ್ರಿ 9:05 ಹುಬ್ಬಳ್ಳಿ ತಲುಪುತ್ತಿತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣ ಈ ಸೇವೆಯನ್ನು ಇದೇ 10ರಿಂದ ಕೊನೆಗೊಳಿಸಲಾಗುತ್ತಿದೆ.

ಹೆಚ್ಚು ಬೇಡಿಕೆ ಇರುವ ಹುಬ್ಬಳ್ಳಿ – ಪುಣೆ ಮಾರ್ಗದಲ್ಲಿ ಈ ವಿಮಾನ ಸಂಚರಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version