ಹೆರಿಗೆಯಾಗಿದ್ದು ಹೆಣ್ಣು, ಆದರೆ ಆಸ್ಪತ್ರೆಯವರು ನೀಡಿದ್ದು ಗಂಡು ಮಗುವನ್ನು! - Mahanayaka
6:23 AM Thursday 12 - December 2024

ಹೆರಿಗೆಯಾಗಿದ್ದು ಹೆಣ್ಣು, ಆದರೆ ಆಸ್ಪತ್ರೆಯವರು ನೀಡಿದ್ದು ಗಂಡು ಮಗುವನ್ನು!

babye
15/10/2021

ಮಂಗಳೂರು:  ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ  ನವಜಾತ ಶಿಶು ಬದಲಿಸಿದ ಗಂಭೀರ ಆರೋಪ ನಗರದ ಸರ್ಕಾರಿ ಲೇಡಿಗೋಷನ್ ಹೆರಿಗೆ ಆಸ್ಪತ್ರೆ(Lady Goschen Hospital Mangalore) ವಿರುದ್ಧ ಕೇಳಿ ಬಂದಿದ್ದು, ಘಟನೆ ಸಂಬಂಧ ಆಸ್ಪತ್ರೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಆಸ್ಪತ್ರೆಯ ದಾಖಲೆಗಳನ್ನು ಹೆಣ್ಣು ಮಗು ಎಂದು ತೋರಿಸಲಾಗಿದೆ. ಆದರೆ ಪೋಷಕರಿಗೆ ನೀಡಿರುವುದು ಗಂಡು ಮಗು ಎನ್ನುವ ಆರೋಪ ಕೇಳಿ ಬಂದಿದೆ.  ಇನ್ನೂ ಮಗು ಜನಿಸಿದಾಗಲೂ ಹೆಣ್ಣು ಮಗು ಎಂದೇ ಹೇಳಿದ್ದರು. ಆದರೆ, ಗಂಡು ಮಗುವನ್ನು ಪೋಷಕರಿಗೆ ನೀಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಉಡುಪಿಯ ಕುಂದಾಪುರ ತಾಲೂಕಿನ ಕೋಟೇಶ್ವರ ಮೂಲದ ಮುಸ್ತಫಾ ಎಂಬವರ ಪತ್ನಿ ಸೆ.27ರಂದು ಹೆರಿಗೆಗಾಗಿ ದಾಖಲಾಗಿದ್ದರು. ಹೆರಿಗೆ ನಡೆದ ದಿನದಂದು ಹೆಣ್ಣು ಮಗು ಎಂದ ಹೇಳಿದ್ದ ಆಸ್ಪತ್ರೆ ಸಿಬ್ಬಂದಿ ಬಳಿಕ ಗಂಡು ಮಗುವನ್ನು ನೀಡಿದ್ದಾರೆನ್ನಲಾಗಿದೆ.

ಮಾಹಿತಿಗಳ ಪ್ರಕಾರ ಎಲ್ಲ ದಾಖಲೆಗಳಲ್ಲಿಯೂ ಹೆಣ್ಣು ಮಗು ಎಂದೇ ಆಸ್ಪತ್ರೆ ಸಿಬ್ಬಂದಿ ಉಲ್ಲೇಖಿಸಿದ್ದರು. ಆದರೆ ಅ.14ರಂದು ಡಿಸ್ಚಾರ್ಜ್ ಆಗಿ ಮನೆಗೆ ಹೋಗುವ ವೇಳೆ ಗಂಡು ಮಗುವನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಿಡಿ ಬಿಡುಗಡೆಗೆ ಕ್ಷಣಗಣನೆ ಎಂಬ ಫೋಟೋ ವೈರಲ್: ದೂರು ದಾಖಲು

ಕೋಟಿಗೊಬ್ಬ-3 ಬಿಡುಗಡೆಗೆ ಯಾರಿಂದ ತೊಂದರೆ ಆಯ್ತು ಅಂತ ಗೊತ್ತಿದೆ | ವಿಡಿಯೋ ಶೇರ್ ಮಾಡಿದ ಕಿಚ್ಚ ಸುದೀಪ್

ದೇವಸ್ಥಾನದ ಆವರಣದಲ್ಲಿಯೇ ಮುಖ್ಯ ಅರ್ಚಕನನ್ನು ಗುಂಡು ಹಾರಿಸಿ ಕೊಂದ ಯುವಕರು !

ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿತ: ಶಿಕ್ಷಕನ ಕೃತ್ಯದ ವಿಡಿಯೋ ವೈರಲ್ ಮಾಡಿದ ವಿದ್ಯಾರ್ಥಿಗಳು

ಸಲೀಂ- ಉಗ್ರಪ್ಪ ಸಂಭಾಷಣೆ: ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು | ಡಿ.ವಿ.ಸದಾನಂದ ಗೌಡ

ಡಿಕೆಶಿ ಕುಡುಕರಂತೆ ತೊದಲುತ್ತಾರೆ, ಕಲೆಕ್ಷನ್ ಗಿರಾಕಿ | ಮೈಕ್ ಆನ್ ಆಗಿರೋದು ತಿಳಿಯದೇ ಮಾತನಾಡಿ ಕಾಂಗ್ರೆಸ್ ನಾಯಕರ ಯಡವಟ್ಟು!

ಇತ್ತೀಚಿನ ಸುದ್ದಿ