ಮಂಗಳೂರು: ಕೇಂದ್ರ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗಳಿಗೆ ಹಿಂದೂ ಸಂಘಟನೆಗಳ ವಿರೋಧ - Mahanayaka
4:08 AM Wednesday 11 - December 2024

ಮಂಗಳೂರು: ಕೇಂದ್ರ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗಳಿಗೆ ಹಿಂದೂ ಸಂಘಟನೆಗಳ ವಿರೋಧ

mangalore market
07/11/2022

ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೇಂದ್ರ ಮಾರುಕಟ್ಟೆಯಲ್ಲಿ ಬೀಫ್ ಅಂಗಡಿಗಳಿಗೆ ಅವಕಾಶ ನೀಡುವ ಯೋಜನೆಯನ್ನು ಕೈಬಿಡುವಂತೆ ವಿಎಚ್ ಪಿ – ವಿಶ್ವ ಹಿಂದೂ ಪರಿಷತ್ ಆಗ್ರಹಿಸಿ ಶಾಸಕ ವೇದವ್ಯಾಸ ಕಾಮತ್ ರಿಗೆ ಮನವಿ ಸಲ್ಲಿಸಿತು.

ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೇಂದ್ರ ಮಾರುಕಟ್ಟೆ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿಯ ಮುಖಾಂತರ ಯೋಜನೆ ರೂಪುಗೊಳ್ಳುತ್ತಿದೆ. ಆ ಯೋಜನೆಯಡಿ 9 ಬೀಫ್ ಅಂಗಡಿಗಳಿಗೆ ಅವಕಾಶ ಕಲ್ಪಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಗೋವುಗಳ ಕಳ್ಳತನ, ಅಕ್ರಮ ಕಸಾಯಿಖಾನೆ, ಗೋಹತ್ಯೆ ನಡೆಯುತ್ತಿದ್ದು, ಹಲವುಕಡೆ ಅಕ್ರಮ ಗೋಮಾಂಸಗಳ ಮಾರಾಟ ಆಗುತ್ತಿದೆ. ಈಗ ಇದೆ ರೀತಿ ಬೀಫ್ ಅಂಗಡಿಗಳಿಗೆ ಅವಕಾಶ ನೀಡಿದ್ರೆ , ಇನ್ನಷ್ಟು ಅಕ್ರಮ ಕಸಾಯಿಖಾನೆಗಳ ಮುಖಾಂತರ ಗೋಹತ್ಯೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಇದರಿಂದ ಮುಂದಿನ ದಿನಗಳಲ್ಲಿ ಇದು ಸಂಘರ್ಷಕ್ಕೆ ಕಾರಣವಾಗಿ ಅಶಾಂತಿ ನಿರ್ಮಾಣವಾಗಬಹುದು. ಆದುದರಿಂದ ತಾವುಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಕೇಂದ್ರ ಮಾರುಕಟ್ಟೆಯಲ್ಲಿ ಬೀಫ್ ಅಂಗಡಿಗಳಿಗೆ ಅವಕಾಶ ನೀಡುವ ಯೋಜನೆಯನ್ನು ರದ್ದುಗೊಳಿಸಲು ಕ್ರಮಕೈಗೊಳ್ಳುವಂತೆ ವಿಎಚ್ ಪಿ  ಆಗ್ರಹಿಸಿದೆ.


ನಾನು ಸ್ವಯಂ ಸೇವಕ ಸಂಘದ ಸೇವಕ‌ ಗೋ ಹತ್ಯೆಯನ್ನು ಖಂಡಿಸುತ್ತೇನೆ: ವೇದವ್ಯಾಸ್ ಕಾಮತ್ 

ನಾನು ಬಾಲ್ಯದಿಂದಲೇ ಸ್ವಯಂ ಸೇವಕ ಸಂಘದ ಸೇವಕ‌. ಗೋಹತ್ಯೆಯನ್ನು ನಾನು ಕಟಿಬದ್ಧವಾಗಿ ಖಂಡಿಸುತ್ತೇನೆ. ಬಿಜೆಪಿ ಸರ್ಕಾರ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ. ಈ ಮಧ್ಯೆ ಬೀಪ್ ಸ್ಟಾಲ್ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಒಂದು ವೇಳೆ ಸ್ಟಾಲ್ ನಿರ್ಮಾಣವಾದ್ರೆ ನಾನಂತೂ ಸೆಂಟ್ರಲ್ ಮಾರ್ಕೆಟ್‌ ನಿರ್ಮಾಣವಾದ ಬಳಿಕ ಶಿಲಾನ್ಯಾಸವೇ ಮಾಡುವುದಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್  ಹೇಳಿದ್ದಾರೆ.

ಮಂಗಳೂರಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯ ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ 9 ಬೀಫ್ ಸ್ಟಾಲ್ ನಿರ್ಮಾಣ ವಿಚಾರವಾಗಿ ವಿಎಚ್‌ ಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಶಾಸಕ ಕಾಮತ್‌ಗೆ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಅವರು ‘ಸ್ಮಾರ್ಟ್‌ಸಿಟಿಯಲ್ಲಿ ಈ ಮಾರುಕಟ್ಟೆ ನನ್ನ ಕ್ಷೇತ್ರದ ಪುರಾತನ ಮಾರುಕಟ್ಟೆ.ನಿರ್ಮಾಣ ಆಗಲಿರುವ ಮಾರುಕಟ್ಟೆಯಲ್ಲಿ ಬೀಪ್ ಸ್ಟಾಲ್ ಯೋಜನೆ ಕೈ ಬಿಡದಿದ್ರೆ ನಾನು ಶಿಲಾನ್ಯಾಸವೇ ಮಾಡಲ್ಲ. ಈ ಹಿಂದಿನ ಸರ್ಕಾರದಲ್ಲಿ ಈ ಕಟ್ಟಡದ ಯೋಜನೆ ಹಾಕಲಾಗಿತ್ತು. ಆದ್ರೆ ಹಿಂದೆನೇ ಕಾಮಗಾರಿ ಆಗಬೇಕಿತ್ತು. ಆದ್ರೆ ಕಾಂಗ್ರೆಸ್ ಇದಕ್ಕೆ ಕೋರ್ಟ್‌ ನಿಂದ ಸ್ಟೇ ತಂದಿತ್ತು. ಇಲ್ಲಿ ವಿವಿಧ ಯೋಜನೆಗಳಿಗೆ ಕಾಂಗ್ರೆಸ್ ಅಡ್ಡಿ ಪಡಿಸಿದೆ. ಈ ಯೋಜನೆ ಈ ಹಿಂದೆ ಅನುಷ್ಠಾನ ಆಗಿತ್ತು ಅಂದ್ರು.


ಯಾವುದೇ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಿಲ್ಲ: ಮೇಯರ್ ಸ್ಪಷ್ಟನೆ

jayananda anchan

ಮಂಗಳೂರು ಮಹಾನಗರಪಾಲಿಕೆಯ ಅಧೀನದಲ್ಲಿನ ಕೇಂದ್ರ ಮಾರುಕಟ್ಟೆಯ ಅಧಿಕೃತ ಶಿಲನ್ಯಾಸವನ್ನು ಕೈಗೊಂಡಿರುವುದಿಲ್ಲ. ಪ್ರಸ್ತುತ ಕೇಂದ್ರ ಮಾರುಕಟ್ಟೆಯ ನಿರ್ಮಾಣ ಕೆಲಸ ಇನ್ನಷ್ಟೇ ಪ್ರಾರಂಭಿಸಬೇಕಾಗಿದೆ.

ಹಳೇ ಮಾರುಕಟ್ಟೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಮಾಂಸದ ಮತ್ತು ಇನ್ನಿತರ ಅಂಗಡಿ ಮುಂಗಟ್ಟುಗಳ ಆಧಾರದಲ್ಲಿ ಸ್ಮಾರ್ಟ್ ಸಿಟಿ ಪ್ರಾರಂಭದಲ್ಲಿ  ಬಹಳ ಹಿಂದೆ ಇದರ ರೂಪುರೇಷೆ ಯಾ ನಕ್ಷೆಯನ್ನು ತಯಾರಿಸಲಾಗಿತ್ತೇ ಹೊರತು ಯಾವುದೇ ಮಾಂಸದ ಅಂಗಡಿಗಳಿಗೆ ಟೆಂಡರ್ ಪ್ರಕ್ರಿಯೆಯನ್ನು ನಡೆಸಿ ಅನುಮತಿ ನೀಡಿರುವುದಿಲ್ಲ.

ಈ ಕುರಿತು ಸಾರ್ವಜನಿಕರು ಗಮನ ಹರಿಸಬೇಕಾಗಿ ಈ ಮೂಲಕ ಕೋರಲಾಗಿದೆ ಮತ್ತು  ಮಾರುಕಟ್ಟೆಯ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೆ ಪ್ರಾರಂಭಿಸಲಾಗುವುದರಿಂದ ನಿರ್ಮಾಣ ಕೆಲಸ ಪೂರ್ಣಗೊಂಡ ಬಳಿಕವೇ ಅಂಗಡಿಗಳನ್ನು ಟೆಂಡರ್ ಪ್ರಕ್ರಿಯೆಯ ಮುಖೇನ ಹರಾಜು ಮಾಡಿ ಸಂಬಂಧಿತ ಉದ್ದಿಮೆದಾರರುಗಳಿಗೆ ವ್ಯಾಪಾರ ನಡೆಸಲು ಅನುಮತಿ ನೀಡಲಾಗುವುದು ಎಂದು ಮಂಗಳೂರು ಮೇಯರ್ ಜಯಾನಂದ ಅಂಚನ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ