ಮಂಗಳೂರು: 1.92 ಕೋ.ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆ - Mahanayaka
10:15 AM Saturday 21 - September 2024

ಮಂಗಳೂರು: 1.92 ಕೋ.ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆ

mangalore
19/11/2021

ಮಂಗಳೂರು:  ಕೇಂದ್ರ ಸರ್ಕಾರ ಅಮಾನ್ಯ ಮಾಡಿರುವ ಒಂದು ಸಾವಿರ ಹಾಗೂ 500 ರೂಪಾಯಿಗಳ 1.92 ಕೋಟಿ ರೂ. ಮೊತ್ತದ ನೋಟು ಸಾಗಾಟವನ್ನು ಪತ್ತೆ ಹಚ್ಚಿರುವ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು  ಗುರುವಾರ ಬಂಧಿಸಿದ್ದಾರೆ.

ನಗರದ ಲಾಲ್ ಬಾಗ್ ಬಳಿಯಲ್ಲಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು, ಬಂಧಿತರನ್ನು ಕಣ್ಣೂರು ಬೋರುಗುಡ್ಡೆ ನಿವಾಸಿ ಜುಬೈರ್ ಹಮ್ಮಬ್ಬ, ಪಡೀಲ್ ವೀರನಗರ ನಿವಾಸಿ ದೀಪಕ್ ಕುಮಾರ್ ಹಾಗೂ ಬಜ್ಪೆ ನಿವಾಸಿ ಅಬ್ದುಲ್ ನಾಸಿರ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಒಂದು ಸಾವಿರ ಮುಖ ಬೆಲೆಯ 50 ಲಕ್ಷ ರೂ.ಗಳ ಹಳೆಯ ನೋಟುಗಳು ಹಾಗೂ 500 ರೂ. ಮುಖ ಬೆಲೆಯ 1 ಕೋಟಿ 50 ಲಕ್ಷದ ಐವತ್ತು ಸಾವಿರ ರೂ. ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು  ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


Provided by

ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸರು ಗುರುವಾರ ತನಿಖೆ ನಡೆಸುತ್ತಿದ್ದ ವೇಳೆ ಈ ಹಣ ಪತ್ತೆಯಾಗಿದೆ ಎನ್ನಲಾಗಿದ್ದು, ಖಚಿತ ಮಾಹಿತಿ ಆಧರಿಸಿ ಲಾಲ್ ಬಾಗ್ ಪರಿಸರದಲ್ಲಿ ಕಾರೊಂದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೃಷಿ ಕಾಯ್ದೆ ವಾಪಸ್ | ಪತ್ರಕರ್ತರ ಪ್ರಶ್ನೆಗೆ ನಿರುತ್ತರವಾಗಿ ಮುಂದೆ ನಡೆದ ಸಚಿವೆ ಶೋಭಾ ಕರಂದ್ಲಾಜೆ

ಬಜ್ಪೆಯ ಪೊರ್ಕೋಡಿಯಲ್ಲಿ ದಲಿತ -ಮುಸ್ಲಿಂ ಸ್ನೇಹ ಸಮ್ಮಿಲನ

ಭಾರೀ ಮಳೆಗೆ 3 ಮಂದಿ ಸಾವು: ಪ್ರವಾಹದ ಪರಿಣಾಮ 30 ಮಂದಿ ನಾಪತ್ತೆ

ಸೆಗಣಿ ತಿಂದು, ನೀವೂ ತಿನ್ನಿ ಎಂದು ಕರೆ ನೀಡಿದ ಹುಚ್ಚ ವೈದ್ಯ!

ಬಿಗ್ ನ್ಯೂಸ್: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಮೋದಿ ಸರ್ಕಾರ!

ಹೌದು ನಾನು ಕಿರುಚುವ ಬೊಬ್ಬೆ ಹೊಡೆಯುವ ‘ಕಲ್ಕಿಂಗ್ ಸ್ಟಾರ್’ | ಟೀಕಾಕಾರರಿಗೆ ದೀಪು ಶೆಟ್ಟಿಗಾರ್ ತಿರುಗೇಟು

ಇತ್ತೀಚಿನ ಸುದ್ದಿ