ಪತಿ ಬಾವಿಗೆ ಹಾರಿದರೆ, ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ | ದಂಪತಿಯ ಆತ್ಮಹತ್ಯೆಗೆ ಕಾರಣ ಏನು?
09/06/2021
ಮಂಗಳೂರು: ಒಂದೇ ದಿನ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಕದ್ರಿ ಬಳಿಯ ಪಿಂಟೋಸ್ ಲೇನ್ ನಲ್ಲಿ ಬುಧವಾರ ನಡೆದಿದ್ದು, ಆರ್ಥಿಕ ಮುಗ್ಗಟ್ಟಿನಿಂದಾಗಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ತಬಲ ಕಲಾವಿದ 25 ವರ್ಷ ವಯಸ್ಸಿನ ಸುರೇಶ್ ಹಾಗೂ ಅವರ ಪತ್ನಿ ವಾಣಿ ಆತ್ಮಹತ್ಯೆಗೆ ಶರಣಾಗಿರುವವರಾಗಿದ್ದಾರೆ. ಸುರೇಶ್ ಅವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು,ಪತ್ನಿ ವಾಣಿ ಮನೆಯ ಮಹಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಾಣಿಯವರು ಕಾಲೇಜೊಂದರಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಚಿಟ್ ಫಂಡ್ ನಷ್ಟದ ಹಿನ್ನೆಲೆಯಲ್ಲಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ಬಳಿಕ ಘಟನೆಗೆ ಸ್ಪಷ್ಟ ಕಾರಣಗಳು ಬಯಲಾಗಬೇಕಿದೆ.