ಮಂಗಳೂರಿನಲ್ಲೂ ಹಕ್ಕಿ ಜ್ವರದ ಭೀತಿ: ಸತ್ತು ಬಿದ್ದಿರುವ ಮೂರು ಕಾಗೆಗಳು ಪತ್ತೆ
11/01/2021
ಮಂಗಳೂರು: ಕೊರೊನಾ ವೈರಸ್ ನಡುವೆಯೇ ಹಕ್ಕಿ ಜ್ವರದ ಆತಂಕ ದೇಶಾದ್ಯಂತ ಮೂಡಿದೆ. ಇದೇ ಸಂದರ್ಭದಲ್ಲಿ ಮಂಗಳೂರಿನ ವಾಮಂಜೂರಿನ ಪಚ್ಚನಾಡಿ ಸಮೀಪದಲ್ಲಿ ಕಾಗೆಗಳು ಸತ್ತು ಬಿದ್ದಿರುವುದು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಸಮೀಪದ ರುದ್ರಭೂಮಿಗೆ ಹೋಗುವ ದಾರಿಯಲ್ಲಿ ಮೂರು ಕಾಗೆಗಳು ಸತ್ತು ಬಿದ್ದಿವೆ ಎಂದು ವರದಿಯಾಗಿದೆ. ಈ ದೃಶ್ಯ ಇಂದು ಬೆಳಗ್ಗೆ ಸ್ಥಳೀಯರ ಕಣ್ಣಿಗೆ ಬಿದ್ದಿದೆ.
ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಇದ್ದರೂ ಈವರೆಗೆ ಅಧಿಕೃತವಾಗಿಲ್ಲ. ಆದರೆ ನೆರೆಯ ರಾಜ್ಯಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿರುವ ಬೆನ್ನಲ್ಲೇ ಆತಂಕ ಹೆಚ್ಚಾಗಿದೆ. ಇದೀಗ ಮಂಗಳೂರಿನಲ್ಲೂ ಕಾಗೆ ಸತ್ತು ಬಿದ್ದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಸಾಂದರ್ಭಿಕ ಚಿತ್ರ