ಮಂಗಳೂರಿನಲ್ಲಿ ಕೃತಕ ನೆರೆ: ಶಾಲಾ ವಾಹನ ಚಾಲಕರ ಪಾಡು ಹೇಳತೀರದು! - Mahanayaka
12:29 PM Friday 20 - September 2024

ಮಂಗಳೂರಿನಲ್ಲಿ ಕೃತಕ ನೆರೆ: ಶಾಲಾ ವಾಹನ ಚಾಲಕರ ಪಾಡು ಹೇಳತೀರದು!

mangalore rain
30/06/2022

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಭಾರೀ ಮಳೆ ಸುರಿಯುತ್ತಿದ್ದು, ಇದೇ ವೇಳೆ ಮಂಗಳೂರು ನಗರದ ವಿವಿಧ ಪ್ರದೇಶಗಳು ಸೇರಿದಂತೆ ವಿವಿಧೆಡೆ ಕೃತಕ ನೆರೆ ಸೃಷ್ಟಿಯಾಗಿದೆ.

ಚರಂಡಿಗಳು ತುಂಬಿ ರಸ್ತೆಯಲ್ಲೇ ನೀರು ಹರಿಯುತ್ತಿದ್ದು, ವಾಹನ ಚಾಲಕರು, ಸಾರ್ವಜನಿಕರು ತೀವ್ರವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನೊಂದೆಡೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಡು ಹೇಳತೀರದಂತಾಗಿದ್ದು,  ಮಳೆಯ ಹಿನ್ನೆಲೆಯಲ್ಲಿ  ಶಾಲೆಗೆ ರಜೆ ನೀಡುವ ವಿಚಾರದ ಗೊಂದಲಗಳು,  ಶಾಲಾ ವಾಹನ ಚಾಲಕರು ಹಾಗೂ ಪೋಷಕರ ನಡುವೆ ಅಸಮಾಧಾನ ಸೃಷ್ಟಿಸಿದಂತಾಗಿದೆ.

ಇಂದು ಮುಂಜಾನೆಯಿಂದಲೇ ಮಳೆ ಸುರಿಯುತ್ತಿರುವುದರಿಂದ ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಶಾಲಾ ವಾಹನ ಚಾಲಕರು ರಸ್ತೆ ಯಾವುದು ಚರಂಡಿ ಯಾವುದು ಅನ್ನೋದು ತಿಳಿಯದೇ ಸಂಕಷ್ಟಕ್ಕೀಡಾಗಿದ್ದಾರೆ.  ರಸ್ತೆಯಲ್ಲಿ ನಿಧಾನವಾಗಿ ಚಲಿಸಿದ ಪರಿಣಾಮ ಮಕ್ಕಳನ್ನು ಕರೆದುಕೊಂಡು ಹೋಗಲು ಬರುವ ಶಾಲಾ ವಾಹನಗಳು, ತಡವಾಗಿ ಬಂದಿದ್ದು, ಇದರಿಂದ ಪೋಷಕರು ಆಕ್ರೋಶಕ್ಕೀಡಾಗಿ, ಹಿಗ್ಗಾಮುಗ್ಗಾ ತರಾಟೆಗೆತ್ತಿಕೊಂಡಿದ್ದಾರೆ.


Provided by

ಪ್ರತಿ ಬಾರಿಯಂತೆ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಿದ ಬಳಿಕ ರಜೆ ಘೋಷಿಸಲಾಗಿದೆ. ಶಾಲೆಗೆ ಹೋದವರು ಪಾಠ ಕೇಳಿ, ಹೋಗಲು ಸಮಸ್ಯೆಯಾಗುವವರ ರಜೆ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ,  ವಿದ್ಯಾರ್ಥಿಗಳು ಬೆಳಗ್ಗಿನ ಧಾರಾಕಾರ ಮಳೆಯಲ್ಲಿ ನನೆದುಕೊಂಡೇ ಶಾಲೆಗೆ ಹೋಗಿದ್ದು, ಬಟ್ಟೆ, ಬ್ಯಾಗ್, ಪುಸ್ತಕಗಳು ಮಳೆಗೆ ನೆಂದು ಹೋಗಿವೆ. ಈ ಸ್ಥಿತಿಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳಲು ಸಾಧ್ಯವೇ? ಎನ್ನುವ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು ಎನ್ನುವಂತಾಗಿದೆ.

ಬೆಳಗ್ಗಿನಿಂದ ಆರಂಭವಾದ ಮಳೆ ಇನ್ನೂ ನಿಂತಿಲ್ಲ, ಶಾಲೆಯಿಂದ ಅರ್ಧದಲ್ಲಿ ಮಕ್ಕಳನ್ನು ಕಳುಹಿಸಬೇಡಿ ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ ಸಂಜೆಯವರೆಗೂ ಮಳೆ ಮುಂದುವರಿಯುವ ಲಕ್ಷಣ ಕಂಡು ಬಂದಿದ್ದು, ಎಂದಿನ ಸಮಯಕ್ಕೆ ಹೋದರೂ ಕೂಡ ಇದೇ ಪರಿಸ್ಥಿತಿ ಮುಂದುವರಿದಿದೆ. ಮಳೆ ನಿಲ್ಲುವ ಲಕ್ಷಣಗಳೇ ಕಂಡು ಬರುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.

ಪ್ರತಿ ಬಾರಿಯೂ ಇದೇ ಸಮಸ್ಯೆಯಾಗುತ್ತಿದ್ದು, ವಿದ್ಯಾರ್ಥಿಗಳು ಶಾಲೆಗೆ ತಲುಪಿದ ಬಳಿಕ ರಜೆ ಘೋಷಣೆಯಾಗುತ್ತಿದೆ. ಮಳೆಗೆ ಸಂಬಂಧಿಸಿದಂತೆ ಹವಾಮಾನ ಇಲಾಖೆ ವರದಿಯನ್ನು ಗಮನಿಸಿ ಜಿಲ್ಲಾಡಳಿತ ರಜೆ ಘೋಷಿಸಬೇಕು. ಇಂತಹ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಕಚೇರಿ ಸಮಯಕ್ಕೆ ಕಾಯದೇ ತಕ್ಷಣವೇ ರಜೆಯ ಮುನ್ಸೂಚನೆಯನ್ನು ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಶಾಲಾ ವಾಹನ ಚಾಲಕರಿಗೆ ಬೈಗುಳ:

ಒಂದೆಡೆ ಶಾಲೆಗಳಿಗೆ ರಜೆ ಇದೆಯೋ ಇಲ್ಲವೋ  ಎನ್ನುವುದು ತಿಳಿಯದೇ ಪೋಷಕರು ಆತಂಕಕ್ಕೀಡಾಗಿದ್ದಾರೆ.  ಎಷ್ಟು ಗಂಟೆಗೆ ಮಕ್ಕಳು ವಾಪಸ್ ಬರುತ್ತಾರೆ ಎನ್ನುವುದು ತಿಳಿಯದೇ ಶಾಲಾ ವಾಹನಗಳ ಚಾಲಕರಿಗೆ ಹಿಗ್ಗಾಮುಗ್ಗ ತರಾಟೆಗೆತ್ತಿಕೊಳ್ಳುತ್ತಿರುವುದು ಕಂಡು ಬಂತು. ಅಧಿಕಾರಿಗಳು, ಶಾಲೆಗಳು, ಪೋಷಕರ ನಡುವೆ ಶಾಲಾ ವಾಹನ ಚಾಲಕರು ಸಂದಿಗ್ದತೆಯಲ್ಲಿ ಸಿಲುಕುವಂತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಟೋರಿಕ್ಷಾ ವಿದ್ಯುತ್ ಕಂಬಕ್ಕೆ ಡಿಕ್ಕಿ;  ಎಂಟು ಮಂದಿ ಸಾವು

ಸ್ಯಾಂಡ್ ವಿಚ್ ನಲ್ಲಿ ಮೇಯನೇಸ್ ಜಾಸ್ತಿಯಾಯ್ತೆಂದು ಮಹಿಳೆಯ ಬರ್ಬರ ಹತ್ಯೆ!

ಗ್ರಾಹಕರ ವೇಷದಲ್ಲಿ ಬಂದು ಕತ್ತು ಕೊಯ್ದರು: ಬೆಚ್ಚಿಬೀಳಿಸಿದ ಟೈಲರ್ ಹತ್ಯೆಯ ವಿಡಿಯೋ

ಕೊಲೆಗಡುಕ ಮುಸಲ್ಮಾನರಿಗೆ ಶಿಕ್ಷೆ ನೀಡಲು ಕಾನೂನು ತಿದ್ದುಪಡಿ ಮಾಡಬೇಕು: ಮಾಜಿ ಸಚಿವ ಈಶ್ವರಪ್ಪ

ನಟಿ ಪವಿತ್ರ ಲೋಕೇಶ್ 3ನೇ ಮದುವೆಯ ವದಂತಿ: ಕಾನೂನು ಸಮರಕ್ಕೆ ಮುಂದಾದ ನಟಿ

 

 

ಇತ್ತೀಚಿನ ಸುದ್ದಿ