ಮಂಗಳೂರಿನಲ್ಲಿ ದಿಸೈಕಲ್ ಡಿ ಲಾಂಜ್ ಪಬ್ ಮೇಲೆ ಬಜರಂಗದಳ ದಾಳಿ
ಮಂಗಳೂರು: ನಗರದ ಬಲ್ಮಠದಲ್ಲಿರುವ ಪಬ್ ನಲ್ಲಿ ವಿದ್ಯಾರ್ಥಿಗಳು ಪಾರ್ಟಿ ಮಾಡುತ್ತಿದ್ದರು ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಎನ್ನಲಾಗಿರುವ ತಂಡ ದಾಳಿ ನಡೆಸಿರುವ ಘಟನೆ ನಡೆದಿದೆ.
ಬಲ್ಮಠದ ರಿಸೈಕಲ್ ದಿ ಲಾಂಜ್ ಎಂಬ ಪಬ್ ಮೇಲೆ ದಾಳಿ ನಡೆಸಲಾಗಿದ್ದು, ಪಾರ್ಟಿ ನಿಲ್ಲಿಸುವಂತೆ ಹೇಳಿ, ಪಬ್ ನಿಂದ ಹೊರ ಹೋಗುವಂತೆ ಒತ್ತಾಯಿಸಿದರು ಎಂದು ಆರೋಪಿಸಲಾಗಿದೆ.
ಘಟನೆಯ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಬಜರಂಗದಳದ ಕಾರ್ಯಕರ್ತರನ್ನು ಹೊರಗೆ ಕಳುಹಿಸಿದ್ದಾರೆನ್ನಲಾಗಿದೆ.
ರಿಸೈಕಲ್ ರೆಸ್ಟೋರೆಂಟ್ ಗೆ ಕಮಿಷನರ್ ಶಶಿಕುಮಾರ್ ಭೇಟಿ:
ಘಟನೆ ಹಿನ್ನೆಲೆಯಲ್ಲಿ ಕಮಿಷನರ್ ಶಶಿಕುಮಾರ್ ಅವರು ರಿಸೈಕಲ್ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದು, ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ನಿನ್ನೆ ರಾತ್ರಿ 9 ಗಂಟೆಗೆ ಸಂಘಟನೆಗೆ ಸೇರಿದ ಐದಾರು ಹುಡುಗರು ಬಂದಿದ್ದಾರೆ. ಪಬ್ ನಲ್ಲಿ ಮೈನರ್ ಹುಡುಗ, ಹುಡುಗಿ ಇದ್ದಾರೆ ಎಂದು ಹೇಳಿದ್ದಾರೆ. ಹೀಗಾಗಿ ಬೌನ್ಸರ್ ಒಳಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಇದ್ದರು ಎಂದು ತಿಳಿಸಿದರು.
ಬೌನ್ಸರ್ ಹೇಳಿರುವ ಪ್ರಕಾರ, ಸಂಘಟನೆಯ ಕಾರ್ಯಕರ್ತರು ಪಬ್ ಒಳಗೆ ಹೋಗಿಲ್ಲ. ಹೊರ ಭಾಗದಲ್ಲೇ ಮಾತನಾಡಿದ್ದಾರೆ. ಪಬ್ ಮ್ಯಾನೇಜರ್ ಹಾಗೂ ಬೌನ್ಸರ್ ಹೇಳಿಕೆ ಪಡೆಯಲಾಗಿದೆ ಎಂದರು.
ಪಬ್ ನ ನಿಯಮದ ಪ್ರಕಾರ 21 ವರ್ಷದವರು ಬರಬಹುದು. ಅಂತಿಮ ಪದವಿ ಕಾಲೇಜಿನ ವಿದ್ಯಾರ್ಥಿಗಳ ಬಂದಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka