ಮಂಗಳೂರಿನಲ್ಲೂ ದೇವಸ್ಥಾನ, ಮಸೀದಿ, ಧಾರ್ಮಿಕ ಕಟ್ಟಡಗಳ ತೆರವಿಗೆ ಸಿದ್ಧತೆ?
ಮಂಗಳೂರು: ಮೈಸೂರಿನಲ್ಲಿ ಅನಧಿಕೃತ ದೇವಸ್ಥಾನಗಳ ತೆರವು ವಿಚಾರ ತೀವ್ರತೆ ಪಡೆದ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ದೇವಸ್ಥಾನಗಳ ತೆರವಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದ್ದು, ಧಾರ್ಮಿಕ ಕಟ್ಟಡ ತೆರವಿಗೆ ಪಟ್ಟಿ ಸಿದ್ಧವಾಗಿದೆ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, 2009ರ ಹಿಂದಿನ ಒಟ್ಟು 902 ಅನಧಿಕೃತ ಕಟ್ಟಡಗಳ ತೆರವು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ಇದರಲ್ಲಿ 667 ದೇವಸ್ಥಾನಗಳು, 186 ಮಸೀದಿಗಳು, 56 ಚರ್ಚ್ ಗಳು ಸೇರಿದಂತೆ ಇತರ 11 ಧಾರ್ಮಿಕ ಕಟ್ಟಡಗಳು ಸೇರಿವೆ ಎಂದು ಹೇಳಲಾಗಿದೆ.
ಸರ್ಕಾರಕ್ಕೆ ಇದೊಂದು ಕಟ್ಟಡ ತೆರವು ಕಾರ್ಯಕ್ರಮವಾಗಿದ್ದರೆ, ಜನರು, ಹಾಗೂ ಸಂಘಟನೆಗಳಿಗೆ ಇದೊಂದು ಧಾರ್ಮಿಕ ಭಾವನೆಯಾಗಿದೆ. ಮಂಗಳೂರಿನಲ್ಲಿ ಕೂಡ ಹಲವು ಧಾರ್ಮಿಕ ಕೇಂದ್ರಗಳು ನೆಲಕ್ಕುರುಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅದೂ ಕೂಡ ಬಿಜೆಪಿ ಆಡಳಿತದಲ್ಲಿ ಇಂತಹದ್ದೊಂದು ಕಾರ್ಯಾಚರಣೆ ಜನರಿಗೆ ಶಾಕಿಂಗ್ ನ್ಯೂಸ್ ಆಗಿದೆ.
ಇನ್ನಷ್ಟು ಸುದ್ದಿಗಳು…
ತಂದೆಯನ್ನು ಕೊಂದು, ಕುಡಿದು ಬಿದ್ದು ಸತ್ತ ಎಂದು ನಂಬಿಸಿದ ಪುತ್ರ | ಪುತ್ರನ ಹೈಡ್ರಾಮ ಬಯಲಾಗಿದ್ದು ಹೇಗೆ ಗೊತ್ತಾ?
ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದರೂ, ವಿರೋಧ ಪಕ್ಷದಲ್ಲಿಯೇ ಕೂರಿಸುತ್ತೇನೆ | ಯಡಿಯೂರಪ್ಪ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾರಂಭಕ್ಕೆ ಕೊನೆಗೂ ಗ್ರೀನ್ ಸಿಗ್ನಲ್
ಕುಂಭಮೇಳಕ್ಕೆ ಬಂದಿದ್ದ ಯುವತಿಯನ್ನು ಅತ್ಯಾಚಾರ ನಡೆಸಿ, ಚಿಕ್ಕಪ್ಪನಿಂದಲೇ ಬ್ಯ್ಲಾಕ್ ಮೇಲ್ !
ಶಾಕಿಂಗ್ ನ್ಯೂಸ್: ಹಫ್ತಾ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯ ಮೇಲೆ ರೌಡಿಗಳಿಂದ ಗ್ಯಾಂಗ್ ರೇಪ್
ಹೃದಯ ವಿದ್ರಾವಕ ಘಟನೆ: ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಕ್ಕಳ ಮೇಲೆಯೇ ಉರುಳಿ ಬಿತ್ತು ಕಟ್ಟಡ!