ಮಂಗಳೂರಿನ ಪಿಎಫ್ ಐ ಕಚೇರಿಗೆ ಸೀಲ್ ಹಾಕಿದ ಪೊಲೀಸರು
ಮಂಗಳೂರು: ಪಿಎಫ್ ಐ ಕಛೇರಿಗೆ ಬೀಗ ಜಡಿಯಲು ಆದೇಶದ ಹಿನ್ನೆಲೆಯಲ್ಲಿ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ ಐ ಕಛೇರಿ ಪಿಎಫ್ಐ ಕಛೇರಿ ಬಳಿ ಪೊಲೀಸ್ ಭದ್ರತೆಯಲ್ಲಿ ಸೀಝ್ ಮಾಡಲಾಯಿತು.
ಕಛೇರಿಗೆ ಬೀಗ ಜಡಿಯಲು ಪೊಲೀಸರು ಆಗಮಿಸಿದರು. ಇದೇ ವೇಳೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪರಿಶೀಲನೆ ನಡೆಸಿದ್ರು. ಕಳೆದ ಎರಡು ದಿನಗಳಿಂದ ಪಿಎಫ್ ಐ ಕಛೇರಿಗೆ ಬೀಗ ಹಾಕಲಾಗಿದೆ. ಕಛೇರಿ ಬೀಗ ಒಡೆದು ಕಛೇರಿಯಲ್ಲಿ ಪೊಲೀಸರು ತಪಾಸಣೆ ನಡೆಸಿದರು.
ಬಳಿಕ ಪಿಎಫ್ ಐ ಕಛೇರಿಗೆ ಬೀಗ ಜಡಿದು ಸೀಲ್ ಹಾಕಿ ಸೀಝ್ ಮಾಡಲಾಯಿತು. ಪಿಎಫ್ ಐ ಕಛೇರಿ ಸೀಝ್ ಬಳಿಕ ಪೊಲೀಸ್ ಅಯುಕ್ತರು ಹೇಳಿಕೆ ನೀಡಿದ್ದು, ಇಂದು ಮುಂಜಾನೆ ಇಲಾಖೆಗೆ ಸೂಚನೆ ಬಂದಿತ್ತು. ಕೇಂದ್ರ ಸರ್ಕಾರ ಪಿಎಫ್ ಐ ಹಾಗೂ ಸಹ ಸಂಘಟನೆಗಳನ್ನು ಬ್ಯಾನ್ ಮಾಡಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸರ್ಕಾರ ಬ್ಯಾನ್ ಮಾಡಿರುವ ಸಂಘಟನೆಗಳ ಕಛೇರಿಗಳನ್ನು ಸೀಝ್ ಮಾಡಲು ಸೂಚನೆ ಬಂದಿದೆ ಎಂದರು.
ಮಂಗಳೂರು ನಗರದ ಮೂರು ಉಪವಿಭಾಗದಲ್ಲಿ ಕಾರ್ಯಾಚರಣೆ ಮಾಡಿ ಕಛೇರಿಯಲ್ಲಿ ವಸ್ತುಗಳನ್ನು ಸೀಜ್ ಮಾಡಿ ಕಛೇರಿಗೆ ಸೀಲ್ ಮಾಡಲಾಗಿದೆ. ಸಂಘಟನೆ ಮತ್ತು ಸಹಸಂಘಟನೆ ಕಛೇರಿಗಳಲ್ಲಿ ಅಗತ್ಯ ದಾಖಲೆ ಸೀಜ್ ಮಾಡಿದ ಬಳಿಕ ಕಛೇರಿಗಳಿಗೆ ಸೀಲ್ ಮಾಡಲಾಗುತ್ತದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka