ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ‘ಗೀತಾ’ ಇನ್ನಿಲ್ಲ - Mahanayaka

ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ‘ಗೀತಾ’ ಇನ್ನಿಲ್ಲ

geetha
04/09/2022

ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕಳೆದ 11 ವರ್ಷದಿಂದ ಕರ್ತವ್ಯದಲ್ಲಿದ್ದ ಗೀತಾ ಎಂಬ ಹೆಸರಿನ ಶ್ವಾನ ಸಾವಿಗೀಡಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಲ್ಯಾಬ್ರಡಾರ್ ರಿಟ್ರೀವರ್ ಎಂಬ ತಳಿಯ ಈ ಶ್ವಾನವು 2011 ರಲ್ಲಿ ಮೇ 21ರಂದು ಜನಿಸಿದ್ದು, ಅದೇ ವರ್ಷದ ಆಗಸ್ಟ್ 19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು.

ಮಂಗಳೂರಿಗೆ ಅತೀ ಗಣ್ಯರು ಭೇಟಿಯ ಸಂದರ್ಭ ಮತ್ತು ಇತರ ಬಂದೋಬಸ್ತ್ ವೇಳೆ ಸ್ಫೋಟಕ ಪತ್ತೆ ಹಚ್ಚುವ ಕರ್ತವ್ಯದಲ್ಲಿ ತೊಡಗಿಸಿಕೊಂಡಿತ್ತು.  ಈ ಶ್ವಾನದ ಅಂತ್ಯಕ್ರಿಯೆ ಗೌರವದೊಂದಿಗೆ ಪೊಲೀಸ್ ಮೈದಾನದಲ್ಲಿ ನಡೆಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ