ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್, ಅವಹೇಳನಾಕಾರಿ ಪತ್ರ ಪತ್ತೆ! - Mahanayaka
5:07 PM Wednesday 11 - December 2024

ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್, ಅವಹೇಳನಾಕಾರಿ ಪತ್ರ ಪತ್ತೆ!

25/02/2021

ಉರ್ವಾ: ಮಂಗಳೂರಿನಲ್ಲಿ ದೈವಸ್ಥಾನಗಳನ್ನು ಟಾರ್ಗೆಟ್ ಮಾಡಿ ಕಾಣಿಕೆ ಡಬ್ಬಿಗಳಲ್ಲಿ ಅವಹೇಳನಾಕಾರಿ ಬರಹ ಹಾಗೂ ಕಾಂಡೋಮ್ ಗಳನ್ನು ಹಾಕುತ್ತಿರುವ ಘಟನೆಗಳು ಕಳೆದ ಕೆಲವು ಸಮಯಗಳಿಂದ ನಡೆಯುತ್ತಿದ್ದು, ಮಂಗಳೂರಿನ ಕೊರಗಜ್ಜ ದೈವಸ್ಥಾನದಲ್ಲಿ ಇಂತಹ ಘಟನೆಗಳು ನಡೆದ ಬಳಿಕ ಮತ್ತೆ ಇಂತಹದ್ದೇ ಘಟನೆ ಮರುಕಳಿಸಿದೆ.

ಸಾಮಾಜಿಕ ಸಾಮರಸ್ಯ ಕದಡುವ ಉದ್ದೇಶಗಳಿಂದ ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ ಎನ್ನುವ ಅನುಮಾನಗಳೂ ಮೂಡಿವೆ. ಉರ್ವಾ ಬಳಿಯ ದಡ್ಡಲ್ ಕಾಡ್ ಬಬ್ಬು ಸ್ವಾಮಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಾಕಾರಿ ಬರಹಗಳು ಪತ್ತೆಯಾಗಿವೆ.

ಫೆಬ್ರವರಿ 24ರ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕೊರಗಜ್ಜ ದೈವಸ್ಥಾನದ ಕಾಣಿಕೆ ಡಬ್ಬಿಗೂ ಈ ಹಿಂದೆ ಕಾಂಡೋಮ್ ಹಾಕಲಾಗಿತ್ತು. ಈ ಘಟನೆಗಳು ಒಂದಕ್ಕೊಂದು ಸಂಬಂಧವಿರುವಂತೆ ಕಂಡು ಬಂದಿದೆ. ಸಮುದಾಯಗಳ ನಡುವೆ ಘರ್ಷಣೆ ಉಂಟು ಮಾಡುವ ಉದ್ದೇಶದಿಂದ ಇಂತಹ ಕೃತ್ಯ ನಡೆಸಲಾಗುತ್ತಿದೆಯೇ ಎನ್ನುವ ಅನುಮಾನಗಳು ಕೇಳಿ ಬಂದಿವೆ.

ತಕ್ಷಣವೇ ಪೊಲೀಸರು ಈ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು. ದೈವಸ್ಥಾನಗಳನ್ನು ಟಾರ್ಗೆಟ್ ಮಾಡಿ ಜನರ ಭಾವನೆಗಳನ್ನುಕೆರಳಿಸಲು ಯಾರು ಪ್ರಯತ್ನಿಸುತ್ತಿದ್ದಾರೆ ಎನ್ನುವ ಸತ್ಯ ಹೊರ ಬರಬೇಕು ಎನ್ನುವ ಆಕ್ರೋಶದ ಮಾತುಗಳು ಸದ್ಯ ವ್ಯಾಪಕವಾಗಿ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ