ಅಪಘಾತ ಮಾಡಿ ಎಸ್ಕೇಪ್ ಆಗಲು ಯತ್ನಿದ ಕೇರಳ ಮೂಲದ ಕಾರು ಚಾಲಕ ಪೊಲೀಸ್ ವಶಕ್ಕೆ

ullala police
24/12/2022

ಅಪಘಾತ ಮಾಡಿ ಎಸ್ಕೇಪ್ ಆಗಲು ಯತ್ನ ಮಾಡಿದ ಕಾರು ಚಾಲಕನನ್ನು ಹಿಡಿದಿರುವ ಘಟನೆ ಮಂಗಳೂರು ನಗರದ ತಲಪಾಡಿ ದೇವಿಪುರದಲ್ಲಿ ನಡೆದಿದೆ.

ಕೇರಳ ಮೂಲದ ಕಾರು ಚಾಲಕನನ್ನು ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಚಾಲಕ ಮುಬಾರಿಷ್ ಎಂಬುವವರು ಮಂಗಳೂರಿಂದ ಕೇರಳದ ಕಡೆಗೆ ಅತಿ ವೇಗದಿಂದ ಧಾವಿಸುತ್ತಿದ್ದರು.  ರಾಷ್ಟ್ರೀಯ ಹೆದ್ದಾರಿ  66 ರ ಕೋಟೆಕಾರು ಹೆದ್ದಾರಿಯಲ್ಲಿ ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಸ್ಕೂಟರ್ ಸವಾರ ಸೆಟಿದ್ ಬಾಷಾಂಗ್(30) ಗಂಭೀರ ಗಾಯಗೊಂಡು‌ ನಗರದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಸಹ ಸವಾರ ಅಲಿ ಸಾಗರ್(30) ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.

ವಿದೇಶಿಗರಾಗಿರುವ ಸ್ಕೂಟರ್ ಸವಾರ, ಸಹ ಸವಾರ ಮಂಗಳೂರು ವಿ.ವಿಯಲ್ಲಿ ವ್ಯಾಸಂಗಕ್ಕೆಂದು ಬಂದಿದ್ದು, ದೇರಳಕಟ್ಟೆಯ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version