ಗಾಂಜಾ ಘಾಟು: ಮಂಗಳೂರಿನಲ್ಲಿ ಮತ್ತೆ 7 ವಿದ್ಯಾರ್ಥಿಗಳು, ಇಬ್ಬರು ವೈದ್ಯರ ಬಂಧನ
ಮಂಗಳೂರಲ್ಲಿ ಬೆಳಕಿಗೆ ಬಂದಿರುವ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಏಳು ಮಂದಿ ವಿದ್ಯಾರ್ಥಿಗಳನ್ನು ಹಾಗೂ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕೆಲವು ವೈದ್ಯರ ಮತ್ತು ವಿದ್ಯಾರ್ಥಿಗಳ ಗಾಂಜಾ ಮಾರಾಟ-ಸೇವನೆ ಪ್ರಕರಣದ ತನಿಖೆಯನ್ನು ಮಂಗಳೂರು ನಗರ ಪೊಲೀಸರು ಮತ್ತಷ್ಟು ತೀವ್ರಗೊಳಿಸಿ ಈ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಇಬ್ಬರು ವೈದ್ಯರು, ಏಳು ಮಂದಿ ವೈದ್ಯ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ವೈದ್ಯರಾದ ಉತ್ತರ ಪ್ರದೇಶದ ವಿದುಶ್ ಕುಮಾರ್ (27), ಕರ್ನಾಟಕದ ಸುಧೀಂದ್ರ(34), ವೈದ್ಯ ವಿದ್ಯಾರ್ಥಿಗಳಾದ ಸಿದ್ದಾರ್ಥ ಪಾವಸ್ಕರ್(29) ದಿಲ್ಲಿಯ ಶರಣ್ಯ(23), ಕೇರಳದ ಸೂರ್ಯಜೀತ್‌ದೇವ್(20), ಆಯಿಷಾ ಮುಹಮ್ಮದ್(23), ತೆಲಂಗಾಣದವರಾದ ಪ್ರಣಯ್ ನಟರಾಜ(24), ಚೈತನ್ಯ ಆರ್ ತುಮುಲುರಿ(23) ಮತ್ತು ಉತ್ತರ ಪ್ರದೇಶ ಮೂಲದ ಇಶಾ ಮಿಡ್ಡಾ(27) ಎಂಬವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜನವರಿ 7ರಂದು ವೈದ್ಯರ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಪ್ರಕರಣ ಪತ್ತೆಯಾದ ಬಳಿಕ ಈ ಪ್ರಕರಣದಲ್ಲಿ ಬಂಧಿತರ ಒಟ್ಟು ಸಂಖ್ಯೆ 24ಕ್ಕೆ ಏರಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw