ಮಣಿಪುರದಲ್ಲಿ ರೋಷಾಗ್ನಿ: ಆಹಾರ ಸಚಿವರ ಮನೆ, ಆಸ್ತಿಗೆ ಬೆಂಕಿ ಹಚ್ಚಲು ಯತ್ನ
ಮಣಿಪುರದಲ್ಲಿ ಗುಂಪು ಜನಾಂಗೀಯ ಘರ್ಷಣೆಗಳು ಹೆಚ್ಚಾಗಿದ್ದು ಜನರನ್ನು ಬೆಚ್ಚಿಬೀಳಿಸಿದೆ. ಈಶಾನ್ಯ ರಾಜ್ಯವು ಮೇ 3 ರಿಂದ ನಿರಂತರ ಅಶಾಂತಿಯನ್ನು ಕಂಡಿದೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಇಂಫಾಲ್ ಪೂರ್ವ ಜಿಲ್ಲೆಯ ಚಿಂಗಾರೆಲ್ ನಲ್ಲಿ ಮಣಿಪುರದ ಸಚಿವ ಎಲ್. ಸುಸಿಂದ್ರೋ ಅವರ ಖಾಸಗಿ ಗೋಡೌನ್ ಅನ್ನು ಜನರ ಗುಂಪೊಂದು ಸುಟ್ಟುಹಾಕಿದೆ.
ಹೌದು. ಇಂಫಾಲ್ ಪೂರ್ವ ಜಿಲ್ಲೆಯ ಖುರೈನಲ್ಲಿರುವ ಗ್ರಾಹಕ ಹಾಗೂ ಆಹಾರ ವ್ಯವಹಾರಗಳ ಸಚಿವರ ಆಸ್ತಿ ಹಾಗೂ ನಿವಾಸಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಲಾಗಿದೆ. ನಿವಾಸದಿಂದ ಗುಂಪನ್ನು ಚದುರಿಸಲು ಪಡೆಗಳು ಮಧ್ಯರಾತ್ರಿಯವರೆಗೆ ಹಲವಾರು ಸುತ್ತಿನ ಅಶ್ರುವಾಯು ಶೆಲ್ ಗಳನ್ನು ಹಾರಿಸಿದವು. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳಿಂದ ನಿರಾಶ್ರಿತರಾದ ಜನರಿಗೆ ತಾತ್ಕಾಲಿಕ ಮನೆಗಳನ್ನು ಸ್ಥಾಪಿಸಲು ಸ್ಥಳಗಳನ್ನು ಪರಿಶೀಲಿಸಿದ ಕೆಲವೇ ಗಂಟೆಗಳ ನಂತರ ಸಚಿವರ ಮನೆ ಮೇಲೆ ದಾಳಿ ನಡೆದಿದೆ ಮತ್ತು ಸಹಜ ಸ್ಥಿತಿಗೆ ಮರಳುವವರೆಗೂ ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವ ಕೆಲಸ ಸರಕಾರ ಮಾಡುತ್ತಿದೆ ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw