ಮಣಿಪುರ ಘಟನೆ: ಬೆಂಗಳೂರು ವಿವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ: ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಲಿ

ಬೆಂಗಳೂರು: ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆ ವತಿಯಿಂದ ಪ್ರತಿಭಟಿಸಲಾಯಿತು.
ಈ ವೇಳೆ ಮಾತನಾಡಿದ ಇತಿಹಾಸ ವಿಭಾಗದ ಪ್ರಾಧ್ಯಾಪಕಿ ಪ್ರೊ. ನಾಗರತ್ನಮ್ಮ ಅವರು ಭಾರತದ ಸಂವಿಧಾನದ ಪ್ರಕಾರ ಇಲ್ಲಿ ಮಹಿಳೆಯರು, ಪುರುಷರು ಸಮಾನರು. ಆದರೆ ಮಹಿಳೆಯರು ಕೀಳು, ಪುರುಷರು ಮೇಲು ಎಂಬ ಭಾವನೆಯಿಂದ ನೋಡುವ ಪ್ರವೃತ್ತಿ ಇಂದಿಗೂ ನಿಂತಿಲ್ಲ. ಅದಕ್ಕೆ ಮಣಿಪುರದಲ್ಲಿ ನಡೆದ ಘಟನೆಯೇ ಸಾಕ್ಷಿ. ಈ ಮನಸ್ಥಿತಿ ಬದಲಾಗಬೇಕು ಎಂದರು.
ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಸಿ.ಬಿ. ಹೊನ್ನು ಸಿದ್ದಾರ್ಥ ಮಾತನಾಡಿ ಅವರು ಮಣಿಪುರದಲ್ಲಿ ಜು.19ರಂದು ಮೈತ್ರಿ ಸಮುದಾಯದ ಗುಂಪಿನ ಜನರು ಕುಕ್ಕೀ ಎಂಬ ಬುಡಗಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಸಂಪೂರ್ಣವಾಗಿ ಬೆತ್ತಲೆ ಮಾಡಿ ಸಾಮೂಹಿಕ ಅತ್ಯಾಚಾರ ಮಾಡುವ ಮೂಲಕ ಅಮಾನವೀಯ ಕೃತ್ಯವೆಸಗಿದ್ದಾರೆ. ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ, ಅಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯಿಂದ ವಿವಿ ಕುಲಸಚಿವರಾದ ಶೇಕ್ ಲತೀಫ್ ಅವರ ಮೂಲಕ ರಾಷ್ಟ್ರಪತಿಗಳು ಮತ್ತು ಕೇಂದ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ವಿವಿಯ ಎಲ್ಲಾ ವಿದ್ಯಾರ್ಥಿ ಮುಖಂಡರು ಹಾಗೂ ಅಧ್ಯಕ್ಷರು ಲೋಕೇಶ್ ಎನ್. ಮತ್ತು ವಿವಿಯ ಶಿಕ್ಷಕ ವರ್ಗದವರು ಹಾಗೂ ಶಿಕ್ಷಕೇತರ ವರ್ಗದವರು ಮತ್ತು ವಿವಿ ವಿದ್ಯಾರ್ಥಿ ಕಾರ್ಯದರ್ಶಿ ಲಿಂಗರಾಜು ಎಸ್.ಎಂ ಮತ್ತು ನಂದೀಶ್ ಆರ್. ಎನ್.ಹರ್ಷವರ್ಧನ, ಹಿರಿಯ ವಿದ್ಯಾರ್ಥಿ ಶ್ರೀಧರ್ ಎಸ್, ಶಶಿಕುಮಾರ್, ಶುಭಾಕರ್, ಪ್ರಭಾಕರ್, ಚಂದ್ರಶೇಖರ್, ಗುರು, ಅಜಯ್, ಶಿವರಾಮ್, ಪವನ್‌ಕುಮಾರ್ ನಾಯ್ಕ್, ಮದನ್, ಶರತ್, ಹನುಮಂತಪ್ಪ ಬನ್ನಿ, ಆನಂದ್, ನಿಖಿಲ್, ಶ್ರೀನಿವಾಸ್, ಅರುಣ್ ಚಕ್ರವರ್ತಿ, ಶ್ರೀಧರ್, ಈಶ್ವರ್ ಸಿರಿಗೇರಿ, ಹನುಮಂತರಾಯ ಮಲ್ಲಿಕಾರ್ಜುನ, ಅಖಿಲೇಶ್, ರಾಜೇಶ್, ಲವಕುಮರ್, ಶಿವಕುಮಾರ್ ಕಂಗೆ, ಅರುಣ್ ಕುಮಾರ್ ಕೆ, ಮತ್ತಿತರರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw