ಮ್ಯಾನ್ಮಾರ್ ನಿಂದ ಕುಕಿ ಉಗ್ರಗಾಮಿಗಳ ಒಳನುಸುಳುವಿಕೆ ಆರೋಪ: ವರದಿಯನ್ನು ತಿರಸ್ಕರಿಸಿದ ಮಣಿಪುರ ಅಧಿಕಾರಿಗಳು
ಮ್ಯಾನ್ಮಾರ್ ನಿಂದ ತರಬೇತಿ ಪಡೆದ 900 ಕುಕಿ ಉಗ್ರರು ಒಳನುಸುಳಿರುವ ಕುರಿತಾದ ವರದಿಗಳನ್ನು ಮಣಿಪುರದ ಹಿರಿಯ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ರಾಜ್ಯದ ಮುಖ್ಯ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಮತ್ತು ಪೊಲೀಸ್ ಮಹಾನಿರ್ದೇಶಕ ರಾಜೀವ್ ಸಿಂಗ್ ಜಂಟಿ ಹೇಳಿಕೆಯಲ್ಲಿ, ಈ ಹಿಂದೆ ಎಚ್ಚರಿಕೆಗೆ ಕಾರಣವಾದ ಗುಪ್ತಚರ ಒಳಹರಿವುಗಳನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಅಂತಹ ಯಾವುದೇ ಒಳಹರಿವನ್ನು ನಂಬಲು ಪ್ರಸ್ತುತ ಯಾವುದೇ ಆಧಾರವಿಲ್ಲ” ಎಂದು ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವರದಿಯನ್ನು ಕೂಲಂಕಷವಾಗಿ ತನಿಖೆ ಮಾಡಲಾಗಿದೆ ಎಂದು ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ್ದಾರೆ.
ತೌಬಲ್ ಜಿಲ್ಲಾ ಪೊಲೀಸರ ಆರಂಭಿಕ ತನಿಖೆಯು ಸೆಪ್ಟೆಂಬರ್ 28 ರಂದು ಮ್ಯಾನ್ಮಾರ್ ನಿಂದ ಕಣಿವೆಗೆ ಭಯೋತ್ಪಾದಕರು ಒಳನುಸುಳುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು. ಮುಖ್ಯಮಂತ್ರಿ ಕಚೇರಿ ಸೆಪ್ಟೆಂಬರ್ 16 ರಂದು ಉನ್ನತ ಭದ್ರತಾ ಅಧಿಕಾರಿಗಳಿಗೆ ಇದೇ ರೀತಿಯ ಸೂಚನೆಗಳನ್ನು ರವಾನಿಸಿತ್ತು. ಹೀಗಾಗಿ ಮಣಿಪುರದಾದ್ಯಂತ ಎಚ್ಚರಿಕೆ ವಹಿಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth