ಮಣಿಪುರ ಗಲಭೆ, ಅತ್ಯಾಚಾರ: ಬೆತ್ತಲಾದ ಆಡಳಿತದ ವಿರುದ್ಧ ಧ್ವನಿ ಎತ್ತಬೇಕಿದೆ - Mahanayaka
10:34 PM Wednesday 5 - February 2025

ಮಣಿಪುರ ಗಲಭೆ, ಅತ್ಯಾಚಾರ: ಬೆತ್ತಲಾದ ಆಡಳಿತದ ವಿರುದ್ಧ ಧ್ವನಿ ಎತ್ತಬೇಕಿದೆ

adarsh joseph
24/07/2023

ಬೆಳ್ತಂಗಡಿ: ಕ್ರೈಸ್ತ ಸಂಘಟನೆಗಳ ಒಕ್ಕೂಟ ಮತ್ತು ಸಮಾನ ಮನಸ್ಕರ ನಾಗರಿಕರ ವತಿಯಿಂದ ಮಣಿಪುರ ಗಲಭೆ ಹಾಗೂ ಅಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅತ್ಯಾಚಾರದ ವಿರುದ್ದ ಧ್ವನಿ ಎತ್ತಿದ್ದು  ಶ್ಲಾಘನೀಯವಾಗಿದೆ.

ಒಂದೇ ದಿನಕ್ಕೆ ಈ ಪ್ರತಿಭಟನೆ ನಿಲ್ಲಬಾರದು. ನ್ಯಾಯ ಸಿಕ್ಕುವವರೆಗೂ ಹೋರಾಟ ಮುಂದುವರಿಯಲಿ. ಗ್ರಾಮ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ರಾಜ್ಯ ಮಟ್ಟದಲ್ಲಿ, ದೇಶ ಮಟ್ಟದಲ್ಲಿ ಕ್ರೈಸ್ತರು ಒಟ್ಟಾಗಿ ಹಾಗೂ ಸಮಾನ ಮನಸ್ಕರು ಒಟ್ಟಾಗಿ  ಬೆತ್ತಲಾದ ಆಡಳಿತದ ವಿರುದ್ಧ ಧ್ವನಿ ಎತ್ತಬೇಕಾಗಿದೆ.

ಕ್ರೈಸ್ತರ ವಿರುದ್ಧ ನಡೆಯುವಂತಹ ಹಿಂಸೆಗಳನ್ನು ವಿರೋಧಿಸುವ ಶಕ್ತಿ ಕ್ರಿಸ್ತನ ಅನುಯಾಯಿಗಳಿಗೆ ಬೇಕು. ಯಾಕೆಂದರೆ 2000 ವರ್ಷದ ಹಿಂದೆ ಅವತ್ತಿನ ರಾಜಕೀಯ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಯೇಸು ಕ್ರಿಸ್ತನ ಅನುಯಾಯಿಗಳು ನಾವು. ಪ್ರಜಾಪ್ರಭುತ್ವ ದೇಶದಲ್ಲಿ ಒಬ್ಬನಿಗೆ ಇಷ್ಟವಾದ ರಾಜಕೀಯ ಪಕ್ಷವನ್ನು ಬೆಂಬಲಿಸುವ ಸ್ವಾತಂತ್ರ್ಯ ಉಂಟು. ಆದರೇ ಕ್ರಿಸ್ತನ ಅನುಯಾಯಿಗಳು ಯಾವುದೇ ಪಕ್ಷದಲ್ಲಿ ಗುರುತಿಸಿ ಕೊಂಡರು ನೇರ, ದಿಟ್ಟ, ನಿಲುವು ಹೊಂದಿರಬೇಕಾಗಿದೆ. ಬೆಕ್ಕಿಗೆ ಮೀನು ಇಟ್ಟು ತೋರಿಸುವ ಹಾಗೆ ಯಾವುದೇ ಪಕ್ಷಗಳು ವೈಯಕ್ತಿಕವಾಗಿ ನೀಡುವ ಉದಾರತೆಗೆ ನಮ್ಮ ನಿಲುವನ್ನು ಋಣ ಪಡಿಸಬಾರದು. ನಮ್ಮ ಧರ್ಮದ ಸ್ವಾತಂತ್ರ್ಯ ಚ್ಯುತಿ ಆಗುತ್ತಿದ್ದರೆ, ಅದರಿಂದ ಹೊರ ಬರುವ ಧೈರ್ಯ ಮತ್ತು ನಿಲುವು ಇರಬೇಕು. ಅದಕ್ಕೆ ಉದಾಹರಣೆ ಮಿಸೋರಾಮಿನ  ಬಿಜೆಪಿ ಉಪಾಧ್ಯಕ್ಷರ ರಾಜೀನಾಮೆ! ಸರ್ಕಾರದ ಸವಲತ್ತುಗಳನ್ನು ತೆಗೆದುಕೊಳ್ಳುವ ಹಕ್ಕು ಮತ್ತು ಜವಾಬ್ದಾರಿ ನಮಗೆ ಇದೆ. ಯಾವುದೇ ರಾಜಕೀಯ ಮತ್ತು ವೈಯಕ್ತಿಕ ಷಡ್ಯಂತ್ರಗಳಿಗೆ ನಮ್ಮನ್ನು ಋಣ ಪಡಿಸದೆ, ಯಾರಿಗೂ ಹೆದರದೆ, ನೇರ, ದಿಟ್ಟ, ನಿಲುವುಗಳಿಂದ ಮಣಿಪುರದಲ್ಲಿ ಉಂಟಾಗುವ ಗಲಭೆಯನ್ನು ನಿಯಂತ್ರಿಸದೆ ಮೌನ ವಾಗಿರುವ ಕೇಂದ್ರದ ಮತ್ತು ರಾಜ್ಯಸರಕಾರ ( ಬಿಜೆಪಿ ಪಕ್ಷದ ಆಳ್ವಿಕೆ ಇರುವ ಸರಕಾರಗಳು ) ವಿರುದ್ಧ ಧ್ವನಿ ಎತ್ತಬೇಕಾಗಿದೆ.

ಮಣಿಪುರದಲ್ಲಿ ಎರಡು ಗೋತ್ರಗಳ ನಡುವೆ ಉಂಟಾದ ಗಲಭೆ, ಬರಿ ಎರಡು ಗೋತ್ರಗಳ ಗಲಭೆ ಅಲ್ಲ. ಅದು ಅಲ್ಲಿರುವ ಕ್ರೈಸ್ತರ ಮೇಲಿನ ದೌರ್ಜನ್ಯ  ಹಾಗೂ ಎರಡು ಗೋತ್ರದಲ್ಲಿ ಇರುವಂತ ಕ್ರೈಸ್ತರನ್ನು ಮಾತ್ರ ಹಿಂಸಾಚಾರಕ್ಕೆ ಒಳಗಾಗುತ್ತಿದೆ ಎಂದು ಮಣಿಪುರದಿಂದ ಹಲವರು ಕೂಗಿ ಹೇಳಿದರೂ ಯಾರು ಸಹ ಅದನ್ನು ಕೇಳಲಿಲ್ಲ. ಬೆಂಗಳೂರು ಆರ್ಚ್ ಬಿಷಪ್ ಸನ್ಮಾನ್ಯ ಪೀಟರ್ ಮಚ್ಚಾದೋ ಅವರು ಮೇ ತಿಂಗಳ ಮೊದಲ ವಾರವೇ ಹೇಳಿದರೂ ಯಾರು ಸಹ ಅವತ್ತು ಬೆಂಬಲ ನೀಡಿಲ್ಲ. ಆದರೇ ಇವತ್ತು ಮಣಿಪುರದ ಭೀಕರ ಚಿತ್ರಗಳು, ಅಲ್ಲಿನ ಹೆಣ್ಣು ಮಕ್ಕಳ ಮೇಲೆ ನಡೆಯುವಂತ ಅತ್ಯಾಚಾರಗಳು, ಮನೆಗಳ ಮೇಲೆ ಬೆಂಕಿ, ಚರ್ಚ್ ಗಳ ಮೇಲೆ ಬೆಂಕಿ,  ಊರು ಬಿಟ್ಟು  ಜೀವಕ್ಕಾಗಿ ಪಲಾಯನ ಮಾಡಿದ ಸಾವಿರಾರು ಜನರು,!!!   ಇದನ್ನು ನೋಡುವಾಗ ಪ್ರಜ್ಞಾವಂತ ನಾಗರಿಕರು ಬೀದಿಗೆ ಇಳಿದು ಹೋರಾಟ ಮಾಡಬೇಕಾಗಿದೆ.  ಇನ್ನೂ ಮೌನವಾಗಿದ್ದರೆ, ಮಣಿಪುರ ನಾಳೆ ನಮ್ಮ ಮನೆಯ ಬಾಗಿಲಿಗೂ ಬರಬಹುದು. ನಮ್ಮ ದೇಶದ ಎಲ್ಲಾ ಪ್ರಜೆಗಳಿಗೆ ಸಂವಿಧಾನ ನೀಡಿರುವ ಸ್ವಾತಂತ್ರ್ಯ ಬೇಕೇ ಬೇಕು. ಅದನ್ನು ಹತ್ತಿಕ್ಕುವ ಸರಕಾರಗಳ ವಿರುದ್ಧ ಜಾತಿ, ಧರ್ಮ, ರಾಜಕೀಯ ಬಿಟ್ಟು ಸಮಾನ ಮನಸ್ಕ ನಾಗರಿಕರು ಒಟ್ಟಾಗಿ ಹೋರಾಟ ಮಾಡಿದರೆ  ಮಾತ್ರ ಅನ್ಯಾಯವಾಗಿ ಜೈಲಿಗೆ ಹಾಕಿ ಹಿಂಸಾಚಾರ ಕೊಟ್ಟ ಫಾ. ಸ್ಟಾನ್ ಸ್ವಾಮಿ, ಅವರ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆ. ( ಗ್ರಹಮ್ ಸ್ಟೈನ್, ರಾಣಿ ಮರಿಯಾ, ಅರುಲ್ ದಾಸ್ )ಇನ್ನೂ ಅನೇಕರು ಕ್ರೈಸರು ಮಾತ್ರವಲ್ಲ ಇನ್ನೂ ಇತರ ಧರ್ಮಕ್ಕೆ ಸೇರಿದವರು ರಾಜಕೀಯ ಷಡ್ಯಂತ್ರಕ್ಕಾಗಿ ಜೀವ ಕಳದು ಕೊಂಡಿದೆ. ನಮ್ಮ ದೇಶದ ನಾಗರಿಕರು ಪ್ರಜ್ಞಾವಂತರಾಗಬೇಕು.

ಇಷ್ಟು ದುರಂತ ನಡೆಯಲು  ಕಾರಣ ಸರಕಾರದ ಮೌನ. ಕೇಂದ್ರ ಸರಕಾರದಲ್ಲಿ ಇರುವ ಮಹಿಳಾ ಸಚಿವರು, ದೇಶದ ರಾಷ್ಟ್ರ ಪತಿಯವರು ಕೂಡ ಒಬ್ಬರು ಮಹಿಳೆ. ಆದರೂ ಮಣಿಪುರದಲ್ಲಿ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ, ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದರೂ ಒಂದೇ ಒಂದು ಮಾತು, ಸಂತಾಪ ಸೂಚಿಸಿಲ್ಲ. ಇಂತಹ ಆಡಳಿತದಿಂದ ಭಾರತದ ಸಂಸ್ಕೃತಿ ಹಾಳಾಗಿದೆ. ನಮ್ಮ ದೇಶದ ಮಹಿಳೆಗೆ .. ತಾಯಿ, ದೇವಿ, ಅಕ್ಕ, ತಂಗಿ, ಹೆಂಡತಿ ಅಂತ ಗೌರವ ಕೊಡುವ ದೇಶದ ಸಂಸ್ಕೃತಿ….. ಬರಿ ರಾಖಿ ಹಬ್ಬದ ದಿನ ಹೆಣ್ಣು ಮಕ್ಕಳ ಕೈ ಯಲ್ಲಿ ರಾಖಿ ಕಟ್ಟಿದರೆ ಮಾತ್ರ ಅವರ ರಕ್ಷಣೆ ಆಗುವುದಿಲ್ಲ. ಲೋಕ ಸಭೆಯ ಕಲಾಪದಲ್ಲಿ ಮಣಿಪುರ ವಿಷಯ ಚರ್ಚೆ ಮಾಡಲು ಸರ್ಕಾರ ತಯಾರಾಗುತ್ತಿಲ್ಲ. ಸರಕಾರಕ್ಕೆ ಬೇಕಾಗುವಂತ ಮಸೂದೆಗಳು.. ಕಾಯಿದೆಗಳು ಒಂದೇ ರಾತ್ರಿಯಲ್ಲಿ ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರುವ ಕೇಂದ್ರ ಸರಕಾರ, ಮಣಿಪುರದಲ್ಲಿ ಇಷ್ಟೊಂದು ಘೋರ ಘಟನೆಗಳು ನಡೆದರೂ ಯಾಕೆ ದ್ವಂದ್ವ ನಿಲುವು ಸ್ವೀಕರಿಸುತ್ತಿದೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

belthangady protest

ನಮ್ಮ ದೇಶದ ಮಾಜಿ ಪ್ರದಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ ಮಾತು ನೆನಪಿಡಬೇಕಾಗಿದೆ. “” ಮನುಷ್ಯ ಚಂದ್ರನಲ್ಲಿಗೆ ತಲುಪಿದ್ದಾನೆ, ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡ ಬಲ್ಲ, ಸಮುದ್ರದಲ್ಲಿ ಮೀನಿನಂತೆ ಈಜಾಡಬಲ್ಲ, ಆದರೆ ಭೂಮಿಯಲ್ಲಿ ಮನುಷ್ಯನಾಗಿ ಬದುಕುತ್ತಿಲ್ಲ “” ಇವತ್ತು ನಮ್ಮ ದೇಶದ ಪರಿಸ್ಥಿತಿಯು ಇವರ ಮಾತಿನಂತೆ ಆಗಿದೆ…. ಬೀದಿ ನಾಯಿಯನ್ನು ಕೊಂದರೆ ಮಾತಾಡುವ ಯಾರು ಸಹ ಮಣಿಪುರ ವಿಷಯದಲ್ಲಿ ಮಾತನಾಡುತ್ತಿಲ್ಲ.

ಎಚ್ಚರ ಎದ್ದೇಳಿ…. ಯಾವುದೇ ಧರ್ಮದವರಾಗಲಿ ನಾಳೆ ಮಣಿಪುರ ನಿಮ್ಮ ಮನೆಯ ಬಾಗಿಲಿಗೂ ಬರಬಹುದು. ಯಾಕೆಂದರೆ ರಾಜಕೀಯ ಬೇಳೆ ಬೇಯುತ್ತಿದೆ….. ಎಚ್ಚರ. ಪತ್ರಿಕಾ ಮತ್ತು ಮಾಧ್ಯಮ ಸ್ವತಂತ್ರ್ಯದಲ್ಲಿ ನಮ್ಮ ದೇಶ 160 ನೇ ಸ್ಥಾನದಲ್ಲಿ ಇದೆ. ಸರಕಾರಗಳು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಎಚ್ಚರ… ಎಚ್ಚರ!”!! ಲೋಕ ಸಮಸ್ತ ಸುಖಿನೋ, ಭವಂತು  ಎಂಬ ನಮ್ಮ ದೇಶದ ಮೂಲ ಸಂಸ್ಕೃತಿ ಎಲ್ಲಿ ಹೋಯಿತು?

” ವೈವಿದ್ಯತೆಯಲ್ಲಿ ಏಕತೆ ” ಎಂಬ ದೇಶದ ಧ್ಯೆಯ ವಾಕ್ಯವನ್ನು ಎತ್ತಿ ಹಿಡಿದು….. ಭಾರತವನ್ನು ಕಟ್ಟೋಣ.

ಜೈ ಭಾರತ ಮಾತೆ…

  • ಫಾ.ಆದರ್ಶ್ ಜೋಸೆಫ್.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿhttps://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿhttps://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿhttps://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ