ಮಣಿಪುರ ಹಿಂಸಾಚಾರ: ಸಿಬಿಐನಿಂದ 6 ಪ್ರಕರಣ ದಾಖಲು
ಮಣಿಪುರ ಹಿಂಸಾಚಾರದ ತನಿಖೆ ನಡೆಸುತ್ತಿರುವ ಕೇಂದ್ರ ತನಿಖಾ ದಳ (ಸಿಬಿಐ) ಆರು ಪ್ರಕರಣಗಳನ್ನು ದಾಖಲಿಸಿದೆ. ಹಾಗೆಯೇ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ ಎಂದು ಸಿಬಿಐ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶಾಸಕ ಸೊರೈಸಮ್ ಕೆಬಿ ಅವರ ನಿವಾಸದ ಗೇಟ್ ನಲ್ಲಿ ಕಡಿಮೆ ತೀವ್ರತೆಯ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನೆಲದಲ್ಲಿ ಕೆಲವು ರಂಧ್ರಗಳನ್ನು ಹೊರತುಪಡಿಸಿ, ಸ್ಫೋಟವು ಯಾವುದೇ ದೊಡ್ಡ ಹಾನಿಯನ್ನು ಉಂಟುಮಾಡಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಣಿಪುರ ಪೊಲೀಸರ ಪ್ರಕಾರ, ಇಬ್ಬರು ಬೈಕ್ ಸವಾರರು ಇಂಫಾಲ್ ಪಶ್ಚಿಮ ಕುಗ್ರಾಮವಾದ ನಿಂಗೆಮ್ಚಾ ಕರೋಂಗ್ ನಲ್ಲಿರುವ ನವೊರಿಯಾ ಪಕಂಗ್ ಲಕ್ಪ ಶಾಸಕ ಸೊರೈಸಮ್ ಕೆಬಿ ಅವರ ನಿವಾಸದ ಮೇಲೆ ಐಇಡಿ ಎಸೆದು ಸ್ಫೋಟಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw