ಹಸಿರು ರೈತ ಉತ್ಪಾದಕರ ಕಂ.ಮಂಜುನಾಥ ಮೈಸೂರು ಅವರಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ, ಟೇಬಲ್ ವಿತರಣೆ
ಚಾಮರಾಜನಗರ: ಹಸಿರು ರೈತ ಉತ್ಪಾದಕರ ಕಂ.ಮಂಜುನಾಥ ಮೈಸೂರು ಸಹಯೋಗದಲ್ಲಿ ತಾಲೂಕಿನ ಹೆಬ್ಬಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶಾಲೆಗೆ ಟೇಬಲ್ ವಿತರಣೆಯು ರೋಟರಿ ಸಂಸ್ಥೆ, ಪ್ರಗತಿ ಮತ್ತು ಪ್ರಥಮ್ ಮೈಸೂರುಇದರ ಸಹಭಾಗಿತ್ವದಲ್ಲಿ ನಡೆಯಿತು.
ಗ್ರಾಮದ ಶಾಲಾವರಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಸಮವಸ್ತ ವಿತರಿಸಿದ ಶ್ರೀಶಂಕರಮಠದ ಧರ್ಮದರ್ಶಿಯಾದ ಶ್ರೀಧರಪ್ರಸಾದ್ ಮಾತನಾಡಿ, ಹಸಿರು ರೈತ ಉತ್ಪಾದಕರ ಕಂ.ಮಂಜುನಾಥ ಅವರು ನಮ್ಮ ಗ್ರಾಮ ಶಾಲೆಯನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಗೆ ಸಮವಸ್ತ್ರ ಶಾಲೆಗೆ ಟೇಬಲ್ ವಿತರಣೆ ಹಾಗೂ ಮಕ್ಕಳ ಇಂಗ್ಲೀಷ್ ಕಲಿಕೆಗೆ ಪೂರಕವಾಗಿ ಇಂಗ್ಲೀಷ್ ಮೇಳ ಹಮ್ಮಿಕೊಂಡಿದ್ದಾರೆ. ಇದೊಂದು ಒಳ್ಳೆಯ ಕಾರ್ಯಕ್ರಮವಾಗಿದೆ ಇದಕ್ಕಾಗಿ ಗ್ರಾಮಸ್ಥರ ಪರವಾಗಿ ಮಂಜುನಾಥ್ ಅವರಿಗೆ ಈ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.
ಇಂಗ್ಲೀಷ್ ಭಾಷೆ ಕಲಿಕೆ ಅನಿವಾರ್ಯ : ರೈತ ಸಂಘದ ಜಿಲ್ಲಾಧ್ಯಕ್ಷ ಹೆಬ್ಬಸೂರು ಬಸವಣ್ಣ ಮಾತನಾಡಿ, ಮಾತೃಭಾಷೆಯಾದ ಕನ್ನಡ ಭಾಷೆಯ ಜೊತಗೆ ಇಂಗ್ಲೀಷ್ ಕಲಿಕೆಯೂ ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಹಸಿರು ರೈತ ಉತ್ಪಾದಕರ ಕಂ.ಮಂಜುನಾಥ ಅವರು ನಮ್ಮ ಗ್ರಾಮದ ಶಾಲೆಯಲ್ಲಿ ಇಂಗ್ಲೀಷ್ ಮೇಳವನ್ನು ಅಯೋಜಿಸಿ ಮಕ್ಕಳಿಗೆ ಇಂಗ್ಲೀಷ್ ಕಲಿಕೆಗೆ ಪ್ರೇರಣಿ ನೀಡುತ್ತಿದ್ದಾರೆ ಇಂತಹ ಕಾರ್ಯಕ್ರಮಗಳ ಹೆಚ್ಚುಹೆಚ್ಚು ನಡೆಯಲಿ ಈ ಕಾರ್ಯಕ್ರಮದಿಂದ ತುಂಬಾ ಸಂತಸವಾಗಿದೆ ಎಂದರು.
ಸರ್ಕಾರಿ ಶಾಲೆ ಎಂದರೆ ಇಂಗ್ಲೀಷ್ ಕಲಿಕೆಯಲ್ಲಿ ಮಕ್ಕಳು ತೊಂದರೆಯನ್ನು ಅನುಭವಂತದ್ದು, ಕಾನ್ವೆಂಟ್ ಗಳಲ್ಲಿ ಇಂಗ್ಲಿಷ್ ಕಲಿಕೆ ಚೆನ್ನಾಗಿರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಕೆ ಸಮಸ್ಯೆಯಾಗಿರುತ್ತದೆ ಇಂತಹ ಸಂದರ್ಭದಲ್ಲಿ ಪ್ರಗತಿ ಮತ್ತು ಪ್ರಥಮ್ ಮೈಸೂರು ಸಹಭಾಗಿತ್ವದಲ್ಲಿ ಇಂಗ್ಲೀಷ್ ಮೇಳವನ್ನು ಹಮ್ಮಿಕೊಂಡು ಮಕ್ಕಳ ಇಂಗ್ಲಿಷ್ ಕಲಿಕೆಗೆ ಪೂರಕವಾಗಿದ್ದು ಇಲಾಖೆಗೂ ಸಹಕಾರ ಕೊಟ್ಟಿದೆ. ಎಲ್ಲವನ್ನು ಇಲಾಖೆ ಮಾಡುವುದು ಕಷ್ಷವಾಗುತ್ತೆ ಇಂತಹ ಸಂದರ್ಭದಲ್ಲಿ ಎನ್ ಜಿಓ ಸಂಸ್ಥೆ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷ ಜಯಶಂಕರ್, ಸದಸ್ಯರಾದ ಎಚ್.ಎಂ.ಮಧು, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶ್ರೀಪತಿ, ಸದಸ್ಯ ಮಹದೇವಮ್ಮ, ಮುಖ್ಯ ಶಿಕ್ಷಕಿ ರಾಜಮ್ಮ, ಮುಖಂಡರಾದ ಜಕವುಲ್ಲಾ, ಆನಂದರಾಮು, ಶಾಂತರಾಜು, ಶೇಖರ್, ನಸ್ರುಲ್ಲಾ, ರವಿ, ಪ್ರಥಮ ಸಂಸ್ಥೆಯ ಬಿಆರ್‌ಎಲ್ ಆದ ಬಿ.ಪ್ರಕಾಶ್ ಹಾಗೂ ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka