ಮರ ಕಡಿಯುತ್ತಿದ್ದ ವೇಳೆ ಮೈಮೇಲೆ ಉರುಳಿದ ಮರ | ಮೂವರು ಯುವಕರ ದಾರುಣ ಸಾವು - Mahanayaka
10:16 AM Wednesday 5 - February 2025

ಮರ ಕಡಿಯುತ್ತಿದ್ದ ವೇಳೆ ಮೈಮೇಲೆ ಉರುಳಿದ ಮರ | ಮೂವರು ಯುವಕರ ದಾರುಣ ಸಾವು

09/03/2021

ಬೆಳ್ತಂಗಡಿ:  ಮರ ಕಡಿಯುತ್ತಿರುವ ವೇಳೆ ಮೈಮೇಲೆಯೇ ಮರ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ ದಾರುಣ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ  ಬೆಳ್ತಂಗಡಿಯ ಪಟ್ರಮೆ ಗ್ರಾಮದ ಅನಾರು ಬಳಿಯ ಕಾಯಿಲ ಸಮೀಪ ನಡೆದಿದೆ.

ಪಟ್ರಮೆ ನಿವಾಸಿಗಳಾದ ಪ್ರಶಾಂತ್‌ (21), ಸ್ವಸ್ತಿಕ್‌ (23) ಮತ್ತು ಉಪ್ಪಿನಂಗಡಿಯ ಗಣೇಶ್‌ (38) ಮೃತಪಟ್ಟವರಾಗಿದ್ದು, ಇನ್ನಿಬ್ಬರು ಯುವಕರು ಸ್ವಲ್ಪದರಲ್ಲಿಯೇ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಧೂಪದ ಮರವನ್ನು ಕಡಿಯುತ್ತಿದ್ದ ವೇಳೆ ಮೂವರು ಯುವಕರ ಮೈಮೇಲೆಯೇ ಮರ ಉರುಳಿದೆ. ಪರಿಣಾಮವಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ ಪಿ.ಜಿ., ಧರ್ಮಸ್ಥಳ ಪೊಲೀಸ್‌ ಠಾಣೆ ಉಪನಿರೀಕ್ಷಕ ಪವನ್‌ ಕುಮಾರ್‌, ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ