ಬರ್ತ್ ಡೇ ಪಾರ್ಟಿ | ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿಯೇ ಡಾನ್ಸ್ | 7 ಮಂದಿ ಆರೋಪಿಗಳ ಬಂಧನ - Mahanayaka
8:10 PM Thursday 12 - December 2024

ಬರ್ತ್ ಡೇ ಪಾರ್ಟಿ | ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿಯೇ ಡಾನ್ಸ್ | 7 ಮಂದಿ ಆರೋಪಿಗಳ ಬಂಧನ

15/01/2021

ಕಲಬುರಗಿ: ಬರ್ತ್ ಡೇ ಪಾರ್ಟಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ರಸ್ತೆಯಲ್ಲಿ ಡಾನ್ಸ್ ಮಾಡಿರುವ ವಿಡಿಯೋವೊಂದು ವೈರಲ್ ಆದ ಬಳಿಕ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.

ಜನವರಿ 12ರಂದು ಈ ಘಟನೆ ನಡೆದಿದೆ. ಸುಹೈಲ್ ಎಂಬಾತನ ಹುಟ್ಟುಹಬ್ಬದಂದು ಇಮ್ರಾನ್, ರಶೀದ್ ಎಂಬವರು ಸೇರಿದಂತೆ ಒಟ್ಟು 7 ಜನರು ರಸ್ತೆಯಲ್ಲಿ ಡಾನ್ಸ್ ಮಾಡಿದ್ದು, ಈ ವೇಳೆ ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ್ದಾರೆ.

ಮಾರಕಾಸ್ತ್ರಗಳನ್ನು ಹಿಡಿದು ಡಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದ್ದು,  ಇದರಿಂದ ಎಚ್ಚೆತ್ತುಕೊಂಡ ರೋಜಾ ಠಾಣೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿ, ವಿವಿಧ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ