ಮಾರ್ಚ್ 1ರಂದು “ದಲಿತ ಮೀಸಲು ನಿಧಿ ಸಮರ್ಪಕ ಬಳಕೆ”ಗಾಗಿ ಪ್ರತಿಭಟನೆ - Mahanayaka
6:28 AM Friday 20 - September 2024

ಮಾರ್ಚ್ 1ರಂದು “ದಲಿತ ಮೀಸಲು ನಿಧಿ ಸಮರ್ಪಕ ಬಳಕೆ”ಗಾಗಿ ಪ್ರತಿಭಟನೆ

24/02/2021

ಮಂಗಳೂರು: ಮಹಾನಗರ ಪಾಲಿಕೆಯು ದಲಿತ ಮೀಸಲು ನಿಧಿಯ ಸಮರ್ಪಕ ಬಳಕೆಯಲ್ಲಿ ಸಂಪೂರ್ಣ ವಿಫಲವಾಗಿದ್ದು ಪಾರದರ್ಶಕ ಹಾಗೂ ಸರಳ ದಾಖಲೆಗಳೊಂದಿಗೆ ವಿಳಂಬಾತಿಯಿಲ್ಲದೆ ಇದರ ಪ್ರಯೋಜನವನ್ನು ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಮಾರ್ಚ್ 1ರಂದು ಬೆಳಿಗ್ಗೆ ಮಂಗಳೂರು ಲಾಲ್‌ ಬಾಗ್ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ ಎಂದು ದಲಿತ ಹಕ್ಕುಗಳ ಸಮಿತಿಯ ಮಂಗಳೂರು ನಗರ ಕಾರ್ಯದರ್ಶಿ ಕೃಷ್ಣ ಪಿ. ಎ ಇವರು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ದಲಿತ ಮೀಸಲು ನಿಧಿಯ ಸೌಲಭ್ಯಗಳ ಕಡಿತವಾಗಿದ್ದು ದಲಿತ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ  ಅಭಿವೃದ್ಧಿಯ ದರದಲ್ಲಿ ತೀವ್ರ ಕುಸಿತ ಉಂಟಾಗಿದೆ. ಆದುದರಿಂದ ಸುಮಾರು 10 ಪ್ರಮುಖ ಬೇಡಿಕೆಗಳ ಆಧಾರದ ಮೇಲೆ ಮಂಗಳೂರು ನಗರದಲ್ಲಿ ದಲಿತರು ವಾಸಿಸುತ್ತಿರುವ ವಿವಿಧ ಕಾಲೊನಿಗಳಲ್ಲಿ ವ್ಯಾಪಕ ಪ್ರಚಾರ ನಡೆಸಲಾಗಿದೆ. ಜನರಲ್ಲಿ ವ್ಯಾಪಕ ಅಸಮಧಾನ ಹೊಗೆಯಾಡುತ್ತಿದೆ.


Provided by

ಆದುದರಿಂದ ಈ ಪ್ರತಿಭಟನೆಗೆ ಹೆಚ್ಚಿನ ಮಹತ್ತ್ವವಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿರುತ್ತಾರೆ.

ಇತ್ತೀಚಿನ ಸುದ್ದಿ