ದಲಿತ ಯುವಕನ ಮರ್ಮಾಂಗಕ್ಕೆ ರಾಡ್ ನುಗ್ಗಿಸಿ ಭೀಕರ ಹಲ್ಲೆ! - Mahanayaka
7:32 AM Thursday 12 - December 2024

ದಲಿತ ಯುವಕನ ಮರ್ಮಾಂಗಕ್ಕೆ ರಾಡ್ ನುಗ್ಗಿಸಿ ಭೀಕರ ಹಲ್ಲೆ!

up news
02/04/2021

ಲಕಿಂಪುರ್ ಕೇರಿ: ಯುವತಿಯೊಂದಿಗೆ ಸಂಬಂಧದ ಆರೋಪದಲ್ಲಿ ದಲಿತ ಯುವಕನ ಮೇಲೆ ಭೀಕರ ದಾಳಿ ನಡೆಸಲಾಗಿದ್ದು,  ಆತನ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ತುರುಕಿಸಿದ ಘಟನೆ ಉತ್ತರ ಪ್ರದೇಶದ ಲಕಿಂಪುರ ಕೇರಿಯಲ್ಲಿ ನಡೆದಿದೆ.

22 ವರ್ಷ ವಯಸ್ಸಿನ ಯುವಕನ ಮೇಲೆ ಈ ದಾಳಿ ನಡೆದಿದೆ ಎಂದು ಕುಟುಂಬದ ಸದಸ್ಯರು ಹೇಳಿದ್ದು, ಆತನ ಮರ್ಮಾಂಗಕ್ಕೆ ಕಬ್ಬಿಣದ ರಾಡ್ ತುರುಕಿಸಿ ಗಂಭೀರವಾಗಿ ಗಾಯಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಆರೋಪವನ್ನು ಪೊಲೀಸ್ ಅಧಿಕಾರಿ ಪ್ರದೀಪ್ ಕುಮಾರ್ ವರ್ಮಾ  ನಿರಾಕರಿಸಿದ್ದಾರೆ.

ಹಲ್ಲೆಗೊಳಗಾಗಿರುವ ಯುವಕ ಗಂಭೀರ ಸ್ಥಿತಿಯಲ್ಲಿದ್ದು, ಆತನನ್ನು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಯುವಕನ ಸಹೋದರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡಿದ ಶಿಕ್ಷೆ) 506 (ಕ್ರಿಮಿನಲ್ ಬೆದರಿಕೆ), ಮತ್ತು ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು  ಪೊಲೀಸ್‌ ಅಧಿಕಾರಿ ಜ್ಞಾನಪ್ರಕಾಶ್‌ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ