20 ಮಂದಿಯ ವಿವಾಹ: 104 ಮಕ್ಕಳನ್ನು ಪಡೆದ ತಾಂಜಾನಿಯಾದ ವ್ಯಕ್ತಿ! - Mahanayaka

20 ಮಂದಿಯ ವಿವಾಹ: 104 ಮಕ್ಕಳನ್ನು ಪಡೆದ ತಾಂಜಾನಿಯಾದ ವ್ಯಕ್ತಿ!

11/03/2025

ತಾಂಜಾನಿಯಾದ ಮಿಸ್ಸಿ ಎನೆಸ್ಟೋ ಮುಯ್ನಿಚ್ಚಿ ಕಪಿಂಗ ಎಂಬ ವ್ಯಕ್ತಿ ಜಾಗತಿಕವಾಗಿ ಸುದ್ದಿಗೀಡಾಗಿದ್ದಾರೆ 20 ಮಂದಿಯನ್ನು ವಿವಾಹವಾಗಿರುವ ಇವರು 104 ಮಕ್ಕಳ ತಂದೆಯಾಗಿದ್ದಾರೆ. ಒಂದು ಸಂದರ್ಭದಲ್ಲಿ ತನ್ನ ತಂದೆ ತನಗೆ ನೀಡಿರುವ ಉಪದೇಶದಂತೆ ತಾನು ಇಷ್ಟು ಮದುವೆ ಮತ್ತು ಮಕ್ಕಳನ್ನ ಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

1961ರಲ್ಲಿ ಇವರು ಮೊದಲ ಮದುವೆಯಾದಾಗ ಇವರ ತಂದೆ ಒಂದು ಮಾತು ಹೇಳಿದ್ದರಂತೆ. ನಮ್ಮ ಕುಟುಂಬ ಬಹಳ ಚಿಕ್ಕದು, ಇದನ್ನು ದೊಡ್ಡ ಕುಟುಂಬವಾಗಿ ಪರಿವರ್ತಿಸಬೇಕು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದರಂತೆ. ತಂದೆಯ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ನಾನು 20 ಮದುವೆಯಾದೆ ಮತ್ತು 104 ಮಕ್ಕಳ ತಂದೆಯಾದೆ ಎಂದು ಅವರು ಹೇಳಿದ್ದಾರೆ.

ಈಗ ಇವರೊಂದಿಗೆ 16 ಮಡದಿಯರಿದ್ದಾರೆ, ಇವರಲ್ಲಿ ಏಳು ಮಂದಿ ಸಹೋದರಿಯರು . ಪ್ರತಿ ಮಡದಿಗೂ ಪ್ರತ್ಯೇಕ ಮನೆ ಮತ್ತು ಬೇಕಾದ ಸೌಲಭ್ಯಗಳನ್ನು ಇವರು ಒದಗಿಸಿದ್ದಾರೆ. ಇವರಿಗೆ 104 ಮಕ್ಕಳಲ್ಲದೆ 144 ಮೊಮ್ಮಕ್ಕಳೂ ಇದ್ದಾರೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ